ಕಮ್ಮಾಜೆಯಲ್ಲಿ ವನಮಹೋತ್ಸವ-2026
Monday, July 6, 2026
ಬಂಟ್ವಾಳ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಡುಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊಳಲಿ ವಲಯದ ಮೇಲ್ವಿಚಾರಕಿ ರೂಪ ರೈ ಹೇಳಿದ್ದಾರೆ.
ಭಾನುವಾರ ನಾಗಶ್ರೀ ಮಿತೃವೃಂದ ಚಾರಿಟೆಬಲ್ ಟ್ರಸ್ಟ್ ಮತ್ತು ನಾಗಶ್ರೀ ಮಾತೃವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿ ಕಮ್ಮಾಜೆಯ ವಿವೇಕ ಭವನದಲ್ಲಿ ವನಮಹೋತ್ಸವ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಡಿನ ವಿನಾಶದಿಂದಾಗಿ ಪ್ರಾಣಿಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಕಾಡುಗಳನ್ನು ಉಳಿಸುವ ಜೊತೆಗೆ ನಮ್ಮ ಮನೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದು ಅಗತ್ಯವಾಗಿದೆ. ಹುಟ್ಟುಹಬ್ಬದ ಪ್ರಯುಕ್ತ ಮಾಡುವ ದುಂದು ವೆಚ್ಚದ ಬದಲು ಸಸಿಗಳನ್ನು ನೆಟ್ಟು ಪೋಷಿಸುವುದರಿಂದ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನು ಮಾಡುತ್ತದೆ ಎಂದರು.
ಭಾರತೀಯ ಜನತಾ ಪಕ್ಷ ತೆಂಕಬೆಳ್ಳೂರು ಶಕ್ತಿ ಕೇಂದ್ರದ ಮುರಳೀಧರ ಶೆಟ್ಟಿ, ನಾಗಶ್ರೀ ಮಿತೃವೃಂದದ ಅಧ್ಯಕ್ಷ ಹರೀಶ್ ಮುಡೈಕೋಡಿ ಮತ್ತು ಕೆಮ್ಮಾಜೆ ಮಾತೃವೃಂದದ ಅಧ್ಯಕ್ಷೆ ಸೌಮ್ಯಾ ತಿಮ್ಮಪ್ಪ ಕಮ್ಮಾಜೆ ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮಸ್ಥರಿಗೆ ಸಸಿಯನ್ನು ವಿತರಿಸಲಾಯಿತು.
ನಾಗಶ್ರೀ ಸಂಘದ ಕ್ರೀಡಾ ಕಾರ್ಯದರ್ಶಿ ರಂಜಿತ್ ಸ್ವಾಗತಿಸಿ, ವಂದಿಸಿದರು.

