ಟೀ ಸ್ಟಾಲ್ ಬಳಿ ಟೀ ಕುಡಿಯುತ್ತಾದ್ದಾತನಿಗೆ ರಿಕ್ಷಾ ಢಿಕ್ಕಿ
Wednesday, July 1, 2026
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮರಕೊಟ್ಲು ಟೋಲ್ ಗೇಟ್ ಬಳಿ ಟೀ ಸ್ಟಾಲ್ ಮುಂಭಾಗ ಟೀ ಕುಡಿಯುತ್ತಾ ನಿಂತಿದ್ದ ವ್ಯಕ್ತಿಯೋರ್ವರಿಗೆ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದ ಘಟನೆ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ.
ಘಟನೆಯಿಂದಾಗಿ ನೌಶದ್ ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿ ಹುಸೈನಬ್ಬ ನೌಶದ್ ಅವರು ಕಾರಿನಲ್ಲಿ ಬಂದು ಬ್ರಹ್ಮರಕೊಟ್ಲು ಟೀ ಸ್ಟಾಲ್ ಬಳಿ ಕಾರು ನಿಲ್ಲಿಸಿ ಟೀ ಕುಡಿಯುತ್ತಿದ್ದ ವೇಳೆ ತುಂಬೆ ಕಡೆಯಿಂದ ಬಿಸಿ ರೋಡ್‌ನತ್ತ ಅತೀ ವೇಗ ಹಾಗೂ ಅಜಾಗರುಕತೆಯಿಂದ ಸಂಚರಿಸುತ್ತಿದ್ದ ಆಟೋರಿಕ್ಷಾ ನಿರ್ಲಕ್ಷ್ಯತನದಿಂದ ತೀರಾ ಎಡಬದಿಗೆ ಬಂದು ಟೀ ಕುಡಿಯುತ್ತಿದ್ದ ನೌಶದ್ ಅವರಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ನೌಶದ್ ಅವರ ಎಡಕಾಲಿಗೆ ಗಾಯವಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.