ಮುಟ್ಟುಗೋಲು ಹಾಕಿರುವ ಪಡಿತರ ಅಕ್ಕಿ ಬಹಿರಂಗ ಹರಾಜು

ಮುಟ್ಟುಗೋಲು ಹಾಕಿರುವ ಪಡಿತರ ಅಕ್ಕಿ ಬಹಿರಂಗ ಹರಾಜು

ಬಂಟ್ವಾಳ: ಸರ್ಕಾರಕ್ಕೆ ಮುಟ್ಟುಗೋಲು ಹಾಕಲಾಗಿರುವ 579.65 ಕೆ.ಜಿ ಬೆಳ್ತಿಗೆ ಪಡಿತರ ಅಕ್ಕಿ ಮತ್ತು 99.73 ಕೆ.ಜಿ ಪಡಿತರ ಕುಚ್ಚಲಕ್ಕಿಯನ್ನು ಬಹಿರಂಗ ಹರಾಜು(ಏಲಂ) ಮೂಲಕ ವಿಲೇವಾರಿ ಮಾಡಲಾಗುತ್ತಿದೆ.

ಆಸಕ್ತಿಯುಳ್ಳವರು ಜುಲೈ 13 ರಂದು ಬೆಳಗ್ಗೆ 10 ಗಂಟೆಗೆ ವಿಟ್ಲದ ನ್ಯಾಯಬೆಲೆ ಅಂಗಡಿ ಸಂಖ್ಯೆ-೧೦೩, ಲ್ಯಾಂಪ್ ಸಹಕಾರ ಸಂಘನಿ. ಬಂಟ್ವಾಳ ಶಾಖೆಯಲ್ಲಿ 1,500 ರೂ. ಮುಂಗಡ ಠೇವಣಿಯನ್ನು ಸರ್ಕಾರಕ್ಕೆ ಸಂದಾಯ ಮಾಡಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.

ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು ಮುಂಗಡ ಠೇವಣಿಯನ್ನು ಹರಾಜಿನ ದಿನಾಂಕದಂದು ಸ್ಥಳದಲ್ಲಿ ನಗದಾಗಿ ಪಾವತಿ ಮಾಡಿ ರಸೀದಿಯನ್ನು ಪಡೆದುಕೊಳ್ಳಬೇಕು. ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ನೀಡಿ ಹರಾಜು ಆರಂಭಿಸುವ ಮುನ್ನ ನಿಗದಿತ ಮುಂಗಡ ಠೇವಣಿಯನ್ನು ಪಾವತಿಸಬೇಕು.

ಹರಾಜು ಮಾಡಲ್ಪಡುವ ಪಡಿತರ ಅಕ್ಕಿಯು ಯಾವ ಸ್ಥಿತಿಯಲ್ಲಿ ಹೇಗಿದೆಯೋ ಅದೇ ಸ್ಥಿತಿಯಲ್ಲಿ ಏಲಂ ಹಾಗೂ ವಿಲೇವಾರಿ ಮಾಡಲಾಗುತ್ತದೆ. ಮುಂಗಡ ಪಾವತಿ ಮಾಡಿದ ಆಸಕ್ತಿದಾರರಲ್ಲದೆ ಬೇರೆಯವರು ಹರಾಜಿನಲ್ಲಿ ಭಾಗವಹಿಸುವಂತಿಲ್ಲ.

ಯಶಸ್ವಿ ಏಲಂದಾರರು ಏಲಂ ಖಾಯಂಗೊಂಡ 3 ಕಛೇರಿ ದಿವಸಗೊಳಗೆ ಮುಂಗಡ ಪಾವತಿಯನ್ನು ಕಳೆದು ಸಂಪೂರ್ಣ ಮೊತ್ತವನ್ನು ಪಾವತಿಮಾಡಬೇಕು ಹಾಗೂ ಸಂಬಂಧಪಟ್ಟ ತೆರಿಗೆಯನ್ನು ಅವರೇ ಪಾವತಿಸಬೇಕು.

ಯಶಸ್ವಿ ಎಲಂದಾರರು ಹರಾಜು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ ತಕ್ಷಣ ತಮ್ಮ ಸ್ವಂತ ಖರ್ಚಿಯಲ್ಲಿ ಪಡಿತರ ಅಕ್ಕಿಯನ್ನು ಸ್ಥಳದಿಂದ ಸಾಗಿಸಬೇಕು. ಹರಾಜು(ಏಲಂ) ಪ್ರಕ್ರಿಯೆಯಲ್ಲಿ ಹರಾಜು ನಿರ್ವಹಣಾಧಿಕಾರಿಯಾಗಿ ಬಂಟ್ವಾಳ ತಾಲೂಕು ಕಚೇರಿಯ, ಆಹಾರ ಶಿರಸ್ತೇದಾರರನ್ನು ನೇಮಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article