ಬಾರ್ಕೂರು ರಂಗನಕೆರೆಯ ಕೊರಗ ಸಮುದಾಯದ ಯುವತಿ ಅಶ್ವಿತಗೆ ಡಾಕ್ಟರೇಟ್

ಬಾರ್ಕೂರು ರಂಗನಕೆರೆಯ ಕೊರಗ ಸಮುದಾಯದ ಯುವತಿ ಅಶ್ವಿತಗೆ ಡಾಕ್ಟರೇಟ್


ಕುಂದಾಪುರ: ಕರಾವಳಿ ಜಿಲ್ಲೆಯ ಮೂಲ ನಿವಾಸಿಗಳು ಎನ್ನಲಾದ ಕೊರಗ ಸಮುದಾಯದಲ್ಲಿ ಇಂದಿಗೂ ಉನ್ನತ ಶಿಕ್ಷಣ ಪಡೆದವರು ತೀರಾ ವಿರಳ.  ಈ ಸಮುದಾಯದ ಬಾರ್ಕೂರು ರಂಗನಕೆರೆಯ ಅಶ್ವಿತ ಎಂಬವರಿಗೆ ಇದೀಗ ಡಾಕ್ಟರೇಟ್ ಪದವಿ ದೊರೆತಿದೆ. 

ಮೈಸೂರು ವಿಶ್ವವಿದ್ಯಾನಿಲಯದ ಸೈಂಟ್ ಫಿಲೋಮಿನಾಸ್ ಕಾಲೇಜ್ (ಆಟೋನಮಾಸ್) ಬನ್ನಿಮಂಟಪ ಇಲ್ಲಿ ಡಾಕ್ಟರ್ ನೂರ್ ಮುಬಾಶಿರ್ ಸಿಎ, ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.

ಡಾ. ಅಶ್ವಿತ ಶ್ರೀ ದುರ್ಗಾಪರಮೇಶ್ವರೀ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ರಂಗನಕೆರೆ ಇಲ್ಲಿ ಅಂಗನವಾಡಿಯಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದು, ಬಳಿಕ ಬಾರ್ಕೂರು ಮೇರಿನೊಲ್ ಶಾಲೆಯಲ್ಲಿ ಪ್ರೌಢ ಶಿಕ್ಷಣ, ನಂತರ ದ್ವಿತೀಯ ಪಿಯುಸಿ ನ್ಯಾಷನಲ್ ಜೂನಿಯರ್ ಕಾಲೇಜ್ ಬಾರ್ಕೂರು ಇಲ್ಲಿ ಓದಿರುತ್ತಾರೆ. ನಂತರ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪದವಿ ಕಾಲೇಜು ಮತ್ತು ಅಧ್ಯಯನ ಕೇಂದ್ರದಲ್ಲಿ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ಮತ್ತು ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ವಿದ್ಯಾಭ್ಯಾಸವನ್ನು ಪಡೆದರು. ಈಕೆ ಗಣೇಶ್ ಬಾರ್ಕೂರು ಅನಿತಾ ದಂಪತಿಯ ಪುತ್ರಿ.

ಇವರು ಸಂಶೋಧನೆಯಲ್ಲಿ ಎ ಸ್ಟಡಿ ಹಾಸ್ಪಿಟಲ್ ಆಂಕ್ಸೆಂಟಿ ಆಂಡ್ ಸೈಕೋ ಸೋಶಿಯಲ್ ಸ್ಟೇಟಸ್ ಆಫ್ ವುಮೆನ್ ಅಂಡರ್ ಗೋಯಿಂಗ್ ಕೀಮೋ ಥೆರಪಿ ಫಾರ್ ಬ್ಲಡ್ ಕ್ಯಾನ್ಸರ್ ಎಂಬ ಮಹಾ ಪ್ರಬಂಧವನ್ನು ಸಮಾಜಕಾರ್ಯ ವಿಷಯದಲ್ಲಿ ಆಂಗ್ಲ ಭಾಷೆಯಲ್ಲಿ ಮಂಡಿಸಿ ಪಿಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article