ಕಾರು ಢಿಕ್ಕಿ: ಬೈಕ್ ಸವಾರ ರಸ್ತೆಗೆ, ಸಹಸವಾರ ಸೇತುವೆಯಿಂದ ಕೆಳಗೆ

ಕಾರು ಢಿಕ್ಕಿ: ಬೈಕ್ ಸವಾರ ರಸ್ತೆಗೆ, ಸಹಸವಾರ ಸೇತುವೆಯಿಂದ ಕೆಳಗೆ

ಬಂಟ್ವಾಳ: ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟರೆ, ಸಹಸವಾರ ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಪೊಳಲಿ ಸೇತುವೆಯಲ್ಲಿ ಸಂಭವಿಸಿದೆ.

ಗಾಯಾಳು ಬೈಕ್ ಸವಾರರನ್ನು ಬೋಳಂತೂರು ನಿವಾಸಿ ಮೊಹಮ್ಮದ್ ಅನ್ಸಾಫ್ (22) ಹಾಗೂ ಸಹಸವಾರ ಮೊಹಮ್ಮದ್ ಸಂಶೀರ್ ಎಂದು ಹೆಸರಿಸಲಾಗಿದೆ.

ಮೊಹಮ್ಮದ್ ಅನ್ಸಾಫ್ ಅವರ ಬೈಕಿನಲಗಲಿ ಸಂಶೀರ್ ಅವರು ಸಹಸವಾರರಾಗಿ ಸಂಚರಿಸುತ್ತಿದ್ದ ವೇಳೆ ಪೊಳಲಿ ಸೇತುವೆಗೆ ತಲುಪಿದಾಗ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಸವಾರ ಅನ್ಸಾಫ್ ರಸ್ತೆಗೆಸೆಯಲ್ಪಟ್ಟು, ಸಹಸವಾರ ಸಂಶೀರ್ ಅವರು ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸೇರಿದ ಸ್ಥಳೀಯರು ಗಾಯಾಳುಗಳನ್ನು ಉಪಚರಿಸಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article