ಬಜರಂಗದಳ ವಿರುದ್ಧ ಅಪಪ್ರಚಾರ: ದೂರು ದಾಖಲು

ಬಜರಂಗದಳ ವಿರುದ್ಧ ಅಪಪ್ರಚಾರ: ದೂರು ದಾಖಲು

ಬಂಟ್ವಾಳ: ಹಿಂದೂ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಪೋಟೋ ತಿರುಚಿ ಬಜರಂಗದಳ ಸಂಘಟನೆಯ ಬಗ್ಗೆ ಅಪಪ್ರಚಾರ ಮಾಡಲು ಮತ್ತು ಕೋಮು ಸಾಮರಸ್ಯ ಹಾಲು ಮಾಡಲು ಯತ್ನಿಸಿದ ವ್ಯಕ್ತಿಗಳು, ಸಾಮಾಜಿಕ ಜಾಲತಾಣಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಬಿ.ಸಿ.ರೋಡ್‌ನಲ್ಲಿ ಅಮಾಯಕ ಹಿಂದೂ ಯುವತಿಯ ಬೀಕರ ಹತ್ಯೆ ಮಾಡಿರುವ ಆರೋಪಿ ಭಾವಚಿತ್ರವನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಆತನ ಭಾವಚಿತ್ರವನ್ನು ಕೇಸರಿ ಶಾಲು ಮತ್ತು ಕುಂಕುಮವನ್ನು ಧಾರಣೆ ಮಾಡುವಂತೆ ಎಡಿಟ್ ಮಾಡಿ ಅದರ ಕೆಳಗೆ ಭಜರಂಗದಳದ ಮುಖಂಡ ಚೇತನ ಎಂಬುದಾಗಿ ಮತ್ತು ಭಜರಂಗದಳ ಶಾಖೆಯಿಂದ ತರಬೇತಿ ಪಡೆದಿದ್ದ ಎಂದು ವಾಟ್ಸ್‌ಆಪ್ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದರಿಂದ ಸಾಮಾಜದಲ್ಲಿ ಸಾಮಾಜಿಕ ಸಾಮರಸ್ಯ ಕೆದಡಿ ಕೊಮು ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಕಲಿ ಎಡಿಟಿಂಗ್ ಫೋಟೋ ಮಾಡಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article