ಗರ್ಡಾಡಿ ಪಲ್ಗುಣಿ ನದಿ ಪರಿಸರದಲ್ಲಿ ನೀರು ನಾಯಿ ಸಂಚಾರ

ಗರ್ಡಾಡಿ ಪಲ್ಗುಣಿ ನದಿ ಪರಿಸರದಲ್ಲಿ ನೀರು ನಾಯಿ ಸಂಚಾರ


ಉಜಿರೆ: ಗರ್ಡಾಡಿ ಗ್ರಾಮದ ಕುಬಳಬೆಟ್ಟು ಗುತ್ತು ಪರಿಸರದ ಪಲ್ಗುಣಿ ನದಿ ತಟದ ಹಳ್ಳದಲ್ಲಿ ಕಳೆದ ಕೆಲವು ದಿನಗಳಿಂದ ನೀರು ನಾಯಿಗಳು ಕಂಡು ಬರುತ್ತಿವೆ. 

ಅಲ್ಲಿಯ ಕೆ. ಸಂಪತ್ ಕುಮಾರ್ ಕೊಂಬ ಎಂಬವರ ಮನೆಯ ಸಮೀಪ ಕೃಷಿ ತೋಟದಲ್ಲಿ ಹರಿಯುವ ಹಳ್ಳದಲ್ಲಿ ಆಗಾಗ ನೀರು ನಾಯಿಗಳು ಕಂಡು ಬರುತ್ತಿವೆ. ಈ ಹಿಂದಿನ ವರ್ಷಗಳಲ್ಲೂ ಈ ಸ್ಥಳದಲ್ಲಿ ನೀರು ನಾಯಿಗಳು ಕಂಡುಬಂದಿದ್ದವು.

ಸಮೀಪದಲ್ಲಿ ಹರಿಯುವ ಪಲ್ಗುಣಿ ನದಿಯನ್ನು ಸೇರುವ ಈ ಹಳ್ಳದಲ್ಲಿ ಸುಮಾರು ಹತ್ತಕ್ಕಿಂತ ಅಧಿಕ ನೀರು ನಾಯಿ ಮರಿಗಳು ಆಗಾಗ ಆಟ ಆಡುವುದು ಕಂಡುಬರುತ್ತಿದೆ. ಆದರೆ ದೊಡ್ಡ ನೀರು ನಾಯಿಗಳು ಹಳ್ಳದಲ್ಲಿ ಬರುವುದು ತೀರಾ ಅಪರೂಪ. ಪಲ್ಗುಣಿ ನದಿ ತಟದಲ್ಲಿ ಸುಮಾರು 25ಕ್ಕಿಂತ ಅಧಿಕ ನೀರು ನಾಯಿಗಳು ಇರುವ ಶಂಕೆ ವ್ಯಕ್ತವಾಗಿದೆ.

ನೀರು ನಾಯಿ ಸಂತತಿ ಅಳಿವಿನಂಚಿನಲ್ಲಿದೆ. ಪಲ್ಗುಣಿ ನದಿ ಪ್ರದೇಶದ ಕುಬಳಬೆಟ್ಟು ಪರಿಸರದಲ್ಲಿ ಮಾತ್ರ ಹೆಚ್ಚಾಗಿ ಇವು ಕಂಡುಬರುತ್ತಿವೆ. ಪಲ್ಗುಣಿ ನದಿ ಪ್ರದೇಶದ ಈ ಪರಿಸರದಲ್ಲಿ ಜನರು ಪ್ರಸ್ತುತ ನದಿಯತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಮಳೆ ಪ್ರಮಾಣ ತೀವ್ರ ಕಡಿಮೆಯಾದ ಕಾರಣ ನದಿಯಲ್ಲಿ ನೀರಿನ ಹರಿವು ಕಡಿಮೆ ಇದೆ. ಈ ಕಾರಣದಿಂದ ನೀರು ನಾಯಿಗಳು ಆಗಾಗ ಆಹಾರ ಅರಸಿಕೊಂಡು ಹಳ್ಳದತ್ತ ಬರುತ್ತಿವೆ ಎನ್ನಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article