ಉಚಿತ ಯೋಗ-ಯಕ್ಷಗಾನ ತರಗತಿ ಉದ್ಘಾಟನೆ
Saturday, July 4, 2026
ಬೆಳ್ಮಣ್: ಬೆಳ್ಮಣ್ ಸಮೀಪದ ಕೈರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತ ಯೋಗ ಮತ್ತು ಯಕ್ಷಗಾನ ತರಗತಿಯ ಉದ್ಘಾಟನಾ ಸಮಾರಂಭ ಇತ್ತಿಚೆಗೆ ನಡೆಯಿತು.
ಯಕ್ಷಗಾನ ಗುರು ಶಿರ್ವ ಭೋಜ ಶೆಟ್ಟಿ, ಯೋಗ ಶಿಕ್ಷಕಿ ಅನಿತಾ ಡಿ. ಸುವರ್ಣ ತರಗತಿಗೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಅಮಿತಾ, ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್, ಹಿರಿಯ ಶಿಕ್ಷಕಿ ಶಾಹಿನ್, ಸಹ ಶಿಕ್ಷಕಿಯರಾದ ದಿವ್ಯಾ, ಆಶಾ, ಸವಿತಾ, ಶ್ವೇತಾ, ಉಪಸ್ಥಿತರಿದ್ದರು.