ಬ್ರಹತ್ ಉದ್ಯೋಗ ಸಂದರ್ಶನ "ವಿಕಾಸ ಉದ್ಯೋಗ ಸೇತು"ಗೆ ಚಾಲನೆ

ಬ್ರಹತ್ ಉದ್ಯೋಗ ಸಂದರ್ಶನ "ವಿಕಾಸ ಉದ್ಯೋಗ ಸೇತು"ಗೆ ಚಾಲನೆ


ಕಾರ್ಕಳ: ಕಾರ್ಕಳ ವಿಕಾಸ ಸೇವಾ ಸಂಸ್ಥೆ ಆಶ್ರಯದಲ್ಲಿ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹತ್ ಉದ್ಯೋಗ ಸಂದರ್ಶನ ಮೇಳ "ವಿಕಾಸ ಉದ್ಯೋಗ ಸೇತು" ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ವಿವೇಕ್ ಆಳ್ವ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ವಿವೇಕ್ ಆಳ್ವ ಅವರು ಉದ್ಯೋಗಕಾಂಕ್ಷಿಗಳಿಗೆ ಪರಿಶ್ರಮ, ನಿರಂತರತೆ ಬೇಕು. ವಿದ್ಯಾವಂತ ಯುವಕ ಯುವತಿಯರು ಸ್ವಂತ ಊರಲ್ಲೇ ತುಂಬಾ ಸುಲಭದ ಕೆಲಸಕ್ಕೆ ಮಹತ್ವ ನೀಡಿ ನಿರುದ್ಯೋಗಿಗಳಾಗುತ್ತೀರಿ, ಮೊದಲ ಕೆಲಸ ನಿಮ್ಮ ಜೀವನದ ಉದ್ಯೋಗಕ್ಕೆ ದಾರಿದೀಪವಾಗಬಹುದು ಬೆಂಗಳೂರು ಮಾತ್ರವಲ್ಲ ದೇಶದ ವಿವಿಧ ರಾಜ್ಯದ ಕಂಪನಿಗಳನ್ನು ಆಯ್ಕೆಮಾಡಿ ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಕೆಲಸ ಮಾಡಲು ಸಾದ್ಯವಾದರೆ ಯಾಕೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಲು ನಮಗೆ ಸಾಧ್ಯವಿಲ್ಲ  ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳಿ ಅವಕಾಶಗಳನ್ನು ಯಾವ ರೀತಿ ಬಳಸಿಕೊಂಡು ಸಂದರ್ಶನದಲ್ಲಿ ಭಾಗವಹಿಸಬೇಕೆಂದು ಮಾಹಿತಿ ನೀಡಿದರು.

ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಹ ಸಂಸ್ಥಾಪಕ ಅಶ್ವಥ್ ಎಸ್ ಎಲ್ ಮಾತನಾಡಿ ಉದ್ಯೋಗಕ್ಕಾಗಿ ಹರಸಾಹಸ ಪಡುವ ಜಿಲ್ಲೆ ಎಷ್ಟೋ ಇದೆ ಯುವ ಜನತೆಯನ್ನು ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸುತ್ತಿರುವ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನೀಲಕುಮಾರ್ ಯುವ ಸಮುದಾಯವನ್ನು ಉದ್ಯೋಗ ನೀಡಿ ಅವರನ್ನು ಬೆಳೆಸಿ ಅವರ ಜೀವನಕ್ಕೊಂದು  ದಾರಿ ತೋರಿಸುತ್ತಿರುವ ಕಾರ್ಯ ಶ್ಲಾಘನೀಯ.

ಉದ್ಯೋಗ ಬೇಡಿ ಪಡೆಯುವುದಲ್ಲ  ಸ್ವಂತ ಸಾಮರ್ಥ್ಯವೂ ಕೂಡ ಅಷ್ಟೇ ಮುಖ್ಯ. ಉದ್ಯೋಗ ಪಡೆಯುವುದು ಮುಖ್ಯವಲ್ಲ ಉದ್ಯೋಗದಲ್ಲಿ ಶಿಸ್ತು, ಪ್ರಾಮಾಣಿಕತೆ, ಪರಿಶ್ರಮ, ನಿಷ್ಠಾವಂತಿಕೆ, ಸ್ವಾವಲಂಬನೆ, ನೈತಿಕ ಮೌಲ್ಯವನ್ನು ಉಪಯೋಗಿಸಿ ಕೊಳ್ಳುವುದು  ಮುಖ್ಯ ಎಂದರು.

ಮಾಜಿ ಸಚಿವ, ಶಾಸಕ ವಿ ಸುನೀಲ್ ಕುಮಾರ್ ಯುವ ಜನತೆಗೆ ಉದ್ಯೋಗಕ್ಕೆ ಯಾವ ರೀತಿ ಸಂದರ್ಶನ ಎದುರಿಸಬೇಕು ಕಂಪನಿಗಳನ್ನು ಯಾವ ರೀತಿ ಹೇಗೆ ಆಯ್ಕೆ ಮಾಡಬೇಕು ವಿದ್ಯಾರ್ಥಿಗಳಿಗೆ ಒಳ್ಳೆಯ ಕಂಪನಿಗಳನ್ನು ಪರಿಚಯಿಸುತ್ತಿದ್ದೇವೆ ಆ ಮೂಲಕ ನಿರಂತರ ಉದ್ಯೋಗ ಮೇಳ ಹಾಗೂ ಉದ್ಯೋಗ ಸಂದರ್ಶನಗಳನ್ನು ನಡೆಸಲು ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇಂದು ನಡೆಯುವ ಬ್ರಹತ್ ಉದ್ಯೋಗ ಸಂದರ್ಶನ ಮೇಳದಲ್ಲಿ ಆಯ್ಕೆಯಾದ ಮಹಿಳಾ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಜೊತೆಗೆ  ಊಟ ವಸತಿ, ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಯುವಕರಿಗೂ ಕೂಡ ಊಟ ವಸತಿ ವ್ಯವಸ್ಥೆ ಮಾಡುವ ಪ್ರಯತ್ನ ನಡೆಯುತ್ತಿದೆ ಇದರ ಪ್ರಯೋಜನ ಪಡೆದುಕೊಳ್ಳಿ ಈ ಹಿಂದೆಯೂ ತಾನು ಸಚಿವನಾಗಿರುವಾಗ ನನ್ನ ಇಲಾಖೆಯಲ್ಲಿ 3 ಸಾವಿರ ಉದ್ಯೋಗಗಳನ್ನು ನೀಡಿದ್ದೇನೆ ಹಲವಾರು ಖಾಸಗಿ ಕಂಪನಿಗಳಲ್ಲಿ ನೂರಾರು ಯುವಕ ಯುವತಿಯರಿಗೆ ಕೆಲಸ ಕೊಡಿಸಿದಂತಹ ತೃಪ್ತಿ ನನಗಿದೆ ಎಂದರು 

ವೇದಿಕೆಯಲ್ಲಿ ಬೆಂಗಳೂರಿನ ಫೋಕ್ಸೋನ್  ಸಂಸ್ಥೆಯ ವ್ಯವಸ್ಥಾಪಕ ದಯಾನಂದ್ ಉಪಸ್ಥಿತರಿದ್ದರು.

ಸಾಣುರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರುಣಾಕರ್ ಕೋಟ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article