ಜು.12ರಂದು ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ
ಮಂಗಳೂರು: ನಗರದ ಸೂಟರ್‌ಪೇಟೆ ಮಜಿಲ ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಜು.12ರಂದು ಬೆಳಗ್ಗೆ 9ಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕ ಕೃಷ್ಣ ಅಡಿಗ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ.
ಸುಮಾರು 1.36ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶಾಸಕ ಡಿ. ವೇದವ್ಯಾಸ ಕಾಮತ್, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೀತಾರಾಮ ಕೋಡಿಕಲ್, ಕಚ್ಚೂರಮಾಲ್ತಿ ದೈವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು, ಜನಾರ್ದನ ಸಾಲ್ಯಾನ್, ವಕೀಲರಾದ ಮೋಹನ್ದಾಸ್ ರೈ, ಶ್ರೀಧರ್ ಸುವರ್ಣ, ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರಚಂದ್ರ ಶೆಟ್ಟಿ, ಭರತ್ ಕುಮಾರ್, ಅಪ್ಪಿ, ಪ್ರಮುಖರಾದ ಸೀತಾರಾಮ ಸಾಲ್ಯಾನ್, ಶರ್ಮ ಪ್ರೇಮ ಕೋಟ್ಯಾನ್, ಎಸ್‌ಬಿಐ ಉಪ ಮ್ಯಾನೇಜರ್ ಅನಂತ್ ಮಂಗಳ್ ಪಾಲ್ಗೊಳ್ಳಲಿದ್ದಾರೆ ಎಂದು ಕ್ಷೇತ್ರದ ಅಧ್ಯಕ್ಷ ರಮೇಶ್ ಕೋಟ್ಯಾನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೂರ್ವಿಕರ ಕಾಲದಿಂದ 3 ಬಾರಿ ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆದಿದೆ. ಇದೀಗ ದೈವಸ್ಥಾನ ಶಿಥಿಲಾವಸ್ಥೆಗೆ ತಲುಪಿದ್ದು, ದೈವದ ಅಪ್ಪಣೆಯಂತೆ, ಮಜಿಲ ಗ್ರಾಮಸ್ಥರ ತೀರ್ಮಾನದಂತೆ ಭಕ್ತರು ಹಾಗೂ ಪ್ರವೀಣ್ ಮಚ್ಚೇಂದ್ರನಾಥ್ ಬಾಬಾ ಅವರ ಸಲಹೆಯಂತೆ ಜೀಣೋದ್ದಾರ ಸಂಕಲ್ಪ ಕೈಗೊಳ್ಳಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ ಎಂದರು.
ಪ್ರಧಾನ ಅರ್ಚಕ ವೆಂಕಪ್ಪ ಪಾತ್ರಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಉಳ್ಳಾಲ್, ಗೌರವ ಸಲಹೆಗಾರ ರೋಹಿತ್ ಉಳ್ಳಾಲ್, ಶಕೀತ್‌ರಾಜ್ ಉಪಸ್ಥಿತರಿದ್ದರು.