ಪಿಎಂ ರಾತ್ ಯೋಜನೆಯಡಿ ಅಪಘಾತಕ್ಕೆ ಒಳಗಾದವರಿಗೆ 1.5 ಲಕ್ಷ ಚಿಕಿತ್ಸಾ ನೆರವು: ಡಾ. ತಿಮ್ಮಯ್ಯ
ಅವರು ಇಂದು ವೆಲ್ಲಾಕ್ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಅಪಘಾತವಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ‘ಇ-ಡಾರ್’ನಲ್ಲಿ ಸಂಪೂರ್ಣ ಮಾಹಿತಿಯನ್ನು ತುಂಬಬೇಕು. ಅದಕ್ಕೆ 1 ಗಂಟೆ ಕಾಲ ತೆಗೆದುಕೊಳ್ಳುತ್ತದೆ. ಅಲ್ಲಿಂದ ಟಿಎಂಎಸ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಆಗುತ್ತದೆ. ಅದು ಸಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಹೋಗುತ್ತದೆ. ಅಲ್ಲಿ ಅದನ್ನು ಅರ್ಪುವಲ್ ಮಾಡಿದ ನಂತರ ಜಿಲ್ಲಾ ಆರೋಗ್ಯ ಅಧಿಕಾರಿಗಳು ಅದನ್ನು ಅನುಮೋದಿಸುತ್ತಾರೆ. ಇದು 7 ದಿನಗಳ ಚಿಕಿತ್ಸಾ ವೆಚ್ಚವನ್ನು ನೀಡುತ್ತದೆ. ತೀರ್ವವಾಗಿ ಗಾಯಗೊಂಡಿದ್ದಲ್ಲಿ 48 ಗಂಟೆ ಕಾಲವಕಾಶವಿರುತ್ತದೆ ಎಂದು ಹೇಳಿದರು.
ಜನರು ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದು, ನಾವು ಎಲ್ಲಿ ಹಣ ಕಟ್ಟವೇಕಾಗುತ್ತದೆ ಎಂದು ಯೋಚಿಸುತ್ತಾರೆ. ಅದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದು, ಅನಾಮಿಕರನ್ನು ಎಪಿಎಲ್-ಬಿಪಿಎಲ್ ಎಂಬ ವ್ಯತ್ಯಾಸವಿಲ್ಲದೇ ಎಲ್ಲರಿಗೂ ಚಿಕಿತ್ಸೆ ನೀಡಲಾಗುವುದು ಎಂದ ತಿಳಿಸಿದರು.
ಎಬಿಆರ್‌ಕೆ ಯೋಜನೆಗೆ ಒಳಪಟ್ಟಿರುವ ಆಸ್ಪತ್ರೆಗಳಿಗೆ ರೋಗಿಗಳನ್ನು ನಾವು ಇಲ್ಲಿಂದ ಕಳುಹಿಸಿಕೊಡುತ್ತಿದ್ದು, ಆಸ್ಪತ್ರೆಯವರು ಮುಂಗಡವಾಗಿ ಹಣ ಕೇಳುತ್ತಿದ್ದಾರೆ ಎಂದು ದೂರುಗಳು ಬರುತ್ತಿದ್ದು, ಅಂತಹ ಆರೋಪಗಳು ಕೇಳಿ ಬಂದಲ್ಲಿ ದೂರುದಾರರನ್ನು ಹಾಗೂ ಆಸ್ಪತ್ರೆಯವರನ್ನು ಕರೆಸಿ ನನ್ನ ಸಮ್ಮುಖದಲ್ಲಿ ಇತ್ಯರ್ಥಗೊಳಿಸಲಾಗುವುದು. ಅದೂ ಸಾಧ್ಯವಾದಲ್ಲಿ ಜಿಲ್ಲಾಧಿಕಾರಿಗಳ ಸಮ್ಮಖದಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಹೇಳಿದರು.