ಯಾವುದೇ ಮಾಹಿತಿ ನೀಡದೇ ಬರುವ ರೋಗಿಗಳು, ಅಸ್ಪತ್ರೆಗೆ ಕೆಟ್ಟ ಹೆಸರು: ಡಾ. ಶಿವಪ್ರಕಾಶ್ ಡಿ.ಎಸ್.
ಅವರು ಇಂದು ಜಿಲ್ಲಾಸ್ಪತ್ರೆಯ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ರಾಜ್ಯದ 31 ಜಿಲ್ಲೆಗಳಿಂದಲೂ ಹಾಗೂ ನೆರೆಯ ಕಾಸರಗೋಡು ಜಿಲ್ಲೆಯಿಂದ ವೆನ್ಲಾಕ್ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದು, ಎಲ್ಲರನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ. ನಾವು ಹಾಸಿಗೆಗಳನ್ನು ಹೆಚ್ಚಿಸಬಹುದು ಅದಕ್ಕೆ ಯಾವುಇದೇ ಸಮಸ್ಯೆ ಇಲ್ಲ. ಆದರೆ ಅದಕ್ಕೆ ತಕ್ಕಂತೆ ನುರಿತ ದಾದಿಯರನ್ನೂ ನೇಮಿಸಬೇಕು. ನಾವು 50 ಹಾಸಿಗೆಯನ್ನು ಹೆಚ್ಚಿಸುತ್ತೇವೆ ಎಂದಾದರೆ ಅದರೊಂದೆ 150 ಜನ ದಾದಿಯರನ್ನು ನೇಮಕಮಾಡಿಕೊಳ್ಳಬೇಕು. ಉತ್ತಮ ರೀತಿ ಆರೂಗ್ಯ ನೀಡುವ ದೃಷ್ಠಿಯಿಂದ ನಾವು ಹಾಸಿಗೆಯನ್ನು ಹೆಚ್ಚಿಸುವ ಚಿಂತನೆ ನಡೆಸಿಲ್ಲ ಎಂದು ಹೇಳಿದರು.
ನೆರೆಯ ಜಿಲ್ಲೆಯಾದ ಉಡುಪಿಯನ್ನು ಹೊರತುಪಡಿಸಿದರೆ ಉಳಿದ ಹೆಚ್ಚಿನ ಜಿಲ್ಲೆಯಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇದ್ದು, ಇಲ್ಲಿ ಯಾವ ರೀತಿಯ ಸೇವೆ ಸಿಗತ್ತದೆಯೋ ಅದೇ ರೀತಿಯ ಸೇವೆ ಅಲ್ಲಿಯೂ ಲಭ್ಯವಿರುತ್ತದೆ. ಆದುದರಿಂದ ಹೆಚ್ಚಿನವರು ಅಲ್ಲಿಯೇ ಚಿಕಿತ್ಸೆ ಪಡೆಯವಹುದು. ಆದರೂ ರಾಜ್ಯದ ಎಲ್ಲಾ ಜಿಲ್ಲೆಯ ರೋಗಿಗಳು ಇಲ್ಲಿಗೆ ಬರುವುದರಿಂದ ಸ್ಥಳೀಯ ವಾಸಿಗಳಿಗೆ ಹಾಸಿಗೆ ಇಲ್ಲದಾಗಿದೆ ಎಂದರು.
ಬೇರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಾಯುವ ಹಂತದಲ್ಲಿರುವ ವೆಂಟಿಲೇಟರ್‌ನಲ್ಲಿ ಇರುವ ರೋಗಿಯನ್ನು ಆಂಬುಲೆನ್ಸ್ ಮೂಲಕ ಯಾವುದೇ ರೀತಿಯ ವಿಚಾರಣೆ ನಡೆಸದೇ ನೇರವಾಗಿ ಕಳುಹಿಸಿಕೊಡುತ್ತಾರೆ. ಇಲ್ಲಿ ಹಾಸಿಗೆ ಇದಿಯೇ ಇಲ್ಲವೇ ಎಂದೂ ವಿಚಾರಿಸುವುದಿಲ್ಲ. ನೇರವಾಗಿ ಇಲ್ಲಿ ಬಂದಾಗ ಹಾಸಿಗೆ ಇಲ್ಲದಿರುವಾಗ ಆಯುಷ್ಮಾನ್ ಆಸ್ಪತ್ರೆಯ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಕರೆ ಮಾಡಿ ಐಸಿಯು ಹಾಸಿಗೆ ಇದಿಯೇ ಎಂದು ವಿಚಾರಿಸಲಾಗುತ್ತದೆ. ಅಲ್ಲಿಯ ತನಕ ಅವರನ್ನು ಆಂಬುಲೆನ್ಸ್‌ನಲ್ಲಿಯೇ ಇರಿಸಲಾಗುವುದು. ಈಗಾಗಲೇ ವೆಂಟಿಲೇಟರ್‌ನಲ್ಲಿರುವವರನ್ನು ತೆಗೆದು ಇವರನ್ನು ಅಲ್ಲಿ ಮಲಗಿಸಲಾಗುವುದಿಲ್ಲ. ವೆಂಟಿಲೇಟರ್‌ನಲ್ಲಿ ಇರುವವರನ್ನು ನೇರವಾಗಿ ಸಾಮಾಜ್ಯ ಹಾಸಿಗೆಯಲ್ಲಿ ಮಲಗಿಸಲು ಸಾಧ್ಯವಿಲ್ಲ. ನಾವು ಬೇರೆ ಆಸ್ಪತ್ರೆಗಳಲ್ಲಿ ವಿಚಾರಿಸಲು 15-20 ನಿಮಿಷ ಬೇಕಾಗುತ್ತದೆ. ಅದಾದ ನಂತರ ಅವರನ್ನು ಆ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಆದರೆ ಇಲ್ಲಿ 20 ನಿಮಿಷ ಕಾಯುವಾಗ ಆಂಬುಲೆನ್ಸ್‌ನಲ್ಲಿಯೇ ಮಲಗಿಸಿದ್ದಾರೆ ಎಂದು ಕೂಗಾಡಿ, ಅಪತ್ರಚಾರ ಮಾಡಿ ಆಸ್ಪತ್ರೆಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಹೇಳಿದರು.
ಈಗಾಗಲೇ ಆರೋಗ್ಯ ಸಚಿವರಲ್ಲಿ ಮಾತನಾಡಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾಸ್ಪತ್ರೆಯ ಅಧಿಕ್ಷಕರುಗಳ ಸಭೆ ನಡೆಸುವಂತೆ ಮನವಿ ಮಾಡಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಹೆಲ್ಪ್‌ಲೈನ್ ತೆರೆದು ಬೇರೆಕಡೆಯಿಂದ ರೋಗಿಯನ್ನು ಕಳುಹಿಸುವ ಮೊದಲು ಆ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಹಾಸಿಗೆ ಇದ್ದಲ್ಲಿ ಮಾತ್ರ ರೋಗಿಗಳನ್ನು ಕಳುಹಿಸಿಕೊಡುವಂತೆ ಹಾಗೂ ಯಾವ ವೈದ್ಯರು ಈ ಆಸ್ಪತ್ರೆಯನ್ನು ಸೂಚಿಸಿರುತ್ತಾರೆ ಅವರ ಹೆಸರು ಹಾಗೂ ಮೊಬೈಲ್ ನಂಬರ್ ಬರೆದು ಸೀಲು ಹಾಕಿ ಸಹಿ ಮಾಡಿ ಕಳುಹಿಸುವಂತೆ ಮನವಿ ಮಾಡಿದ್ದೇವೆ ಎ೪ಂದು ತಿಳಿಸಿದರು.
ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ಕೆಎಂಸಿ ಕಡೆಯಿಂದ 150 ದಾದಿಯರನ್ನು ಹಾಗೂ ನಮ್ಮ ಆಸ್ಪತ್ರೆಯಿಂದ 135 ದಾದಿಯರು ಕಾರ್ಯ ನಿರ್ವಹಿಸುತ್ತಿದ್ದು, ಈಗಲೂ ಅಭಾವವಿದೆ. ಇಲ್ಲಿ ನರ್ಸಿಂಗ್ ಮಾಡಿದ ವಿದ್ಯಾರ್ಥಿಗಳು ಇಲ್ಲಿನ ಆಸ್ಪತ್ರೆಗಳಲ್ಲಿ 2 ವರ್ಷ ಕೆಲಸ ಮಾಡಿ ಹೊರದೇಶಗಳಿಗೆ ಹೋಗುತ್ತಿದ್ದು, ಆದುದರಿಂದ ದಾದಿಯರ ಕೊರತೆಯಾಗುತ್ತಿದೆ. ಆದುದರಿಂದ ಸಮಸ್ಯೆಯಾಗುತ್ತಿದೆ ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ರೋಗಿಗಳು, ಸ್ವಲ್ಪ ಸಮಯದ ನಂತರ ಹಣವೆಲ್ಲ ಖಾಲಿಯಾದ ನಂತರ ನೇರವಾಗಿ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಖಾಸಗಿ ಆಸ್ಪತ್ರೆಯವರಿಗೆ ಇರುವಷ್ಟು ದಿನದ ಹಣ ಸಿದ್ದರೆ ಆಯ್ತು. ಅವರು ಸ್ವಲ್ಪ ಮಾನವೀಯತೆ ತೋರಿಸಬೇಕು. ಇಲ್ಲವಾದಲ್ಲಿ ಕಷ್ಟವಾಗುತ್ತದೆ ಎಂದು ಅಧೀಕ್ಷಕರು ತಿಳಿಸಿದರು.
ಹೇಲ್ಪ್‌ಲೈಲ್ ನಂ:
ಹೆಲ್ಪ್‌ಡೆಸ್ಕ್: 917483035127, ಸರ್ಜಿಕಲ್ ಮತ್ತು ಮೆಡಿಕಲ್ ಬ್ಲಾಕ್‌ನ ಪಿಆರ್‌ಒ ನಿಕೇಶ್ ಮೊ.ನಂ: 918217662885, ಓಪಿಡಿ ಬ್ಲಾಕ್ ಪಿಆರ್‌ಒ ಸುಮಂತ್ ಕೋಡಿಕಲ್ ಮೊ.ನಂ: 919945927253, ಅಡ್ಮಿನ್ ಬ್ಲಾಕ್ ಪಿಆರ್‌ಒ ಧನ್‌ರಾಜ್ ಮೊ.ನಂ: 9167607879