ಉದ್ಯೋಗವಕಾಶ: ಜುಲೈ 21 ರಂದು ಸಂದರ್ಶನ
Saturday, July 18, 2026
ಮಂಗಳೂರು: ಕ್ಯಾಲಿಬರ್ ಕಂಪೆನಿಯ ವತಿಯಿಂದ ಖಾಲಿ ಇರುವ ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್ ಲೀಡರ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಜು.21 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಗರದ ಹಂಪನಕಟ್ಟೆಯ ಕ್ರಿಸ್ಟಲ್ ಆರ್ಕ್ ೩ನೇ ಮಹಡಿಯಲ್ಲಿರುವ ಕ್ಯಾಲಿಬರ‍್ನಲ್ಲಿ ಆಯೋಜಿಸಲಾಗಿದೆ.
ನೇರ ಸಂದರ್ಶನದಲ್ಲಿ ಪಿ.ಯು.ಸಿ ಅಥವಾ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು. ಕೆಲಸದ ಸ್ಥಳ ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಹಾಸನ. ವೇತನ 27,000 ಮತ್ತು ಪಿ.ಎಫ್ ಮತ್ತು ಇತರೆ ಸೌಲಭ್ಯವಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.