ಜು.26 ರಂದು ಪ್ರಸಾದ್ ನೇತ್ರಾಲಯದಿಂದ ‘ಲಾಸಿಕ್-ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ’

ಜು.26 ರಂದು ಪ್ರಸಾದ್ ನೇತ್ರಾಲಯದಿಂದ ‘ಲಾಸಿಕ್-ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ’


ಮಂಗಳೂರು: ಇಲ್ಲಿನ ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಮಂಗಳೂರು ಕೇಂದ್ರದಲ್ಲಿ ಜುಲೈ 26, ಭಾನುವಾರದಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ‘ಲಾಸಿಕ್-ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರ’ ನಡೆಯಲಿದೆ.

18 ವರ್ಷ ಪ್ರಾಯದಿಂದ ಸುಮಾರು 50 ವರ್ಷ ಪ್ರಾಯದವರೆಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್‌ನಿಂದ ಮುಕ್ತಿ ಹೊಂದಬಹುದಾಗಿದೆ. ಈ ಚಿಕಿತ್ಸೆಯಿಂದ ಕೇವಲ 5 ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು. ಚಿಕಿತ್ಸೆಯ ನಂತರ ಕೂಡಲೇ ರೋಗಿಯು ತನ್ನೆಲ್ಲಾ ದೈನಂದಿನ ಚಟುವಟಿಕೆಗಳನ್ನು ಮಾಡಬಹುದಾಗಿದ್ದು, ಈ ಚಿಕಿತ್ಸೆಯಿಂದ ಯಾವುದೇ ನೋವು ಉಂಟಾಗುವುದಿಲ್ಲ.

ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ, ಟೋಪೋಗ್ರಫಿ ಸ್ಕ್ಯಾನ್ (ಶಸ್ತ್ರ ಚಿಕಿತ್ಸೆಗೆ ಮೊದಲು ಮಾಡುವ ಪರೀಕ್ಷೆ) ಮೊದಲಾದ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು. ಚಿಕಿತ್ಸೆಗೆ ಅರ್ಹರಾದ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ ಸಾರ್ವಜನಿಕರು 9513726565 ನಂಬರನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article