ಆ.4 ರಂದು ಮಾಸಿಕ ಆರೋಗ್ಯ ತಪಾಸಣೆ ಉಚಿತ ಶಿಬಿರ

ಆ.4 ರಂದು ಮಾಸಿಕ ಆರೋಗ್ಯ ತಪಾಸಣೆ ಉಚಿತ ಶಿಬಿರ

ಮಂಗಳೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಸೇವಾ ವಿಭಾಗ ಮರೋಳಿ ಖಂಡ ಸಮಿತಿ, ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಮರೋಳಿ ಜೋಡುಕಟ್ಟೆ ಸಮಾಜ ಸೇವಾ ಪ್ರತಿಷ್ಠಾನ ಸಹಕಾರದೊಂದಿಗೆ ಪ್ರತಿ ತಿಂಗಳ ಪ್ರಥಮ ಮಂಗಳವಾರ ಮಾಸಿಕ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಲಿದೆ. 

ಈ ಬಾರಿಯ ಶಿಬಿರ ಆ.4 ರಂದು ಸಂಜೆ 4.30ರಿಂದ ಮರೋಳಿ ಜೋಡುಕಟ್ಟೆ ವಜ್ರಕಾಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆಗಳಾದ ಚರ್ಮ, ಕಿವಿ, ಮೂಗು, ಗಂಟಲು, ಕೀಲು ಮತ್ತು ಗಂಟು ನೋವು ತಪಾಸಣೆ, ಸ್ತ್ರೀರೋಗ ತಪಾಸನೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಕಣ್ಣಿನ ತಪಾಸಣೆ (ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ), ದಂತ ತಪಾಸಣೆ (ಸ್ವಚ್ಛಗೊಳಿಸುವುದು, ಹುಳುಕು ಹಲ್ಲುಗಳ ಭರ್ತಿ), ಹೃದಯ ಸಂಬಂಧಿ ರೋಗ ತಪಾಸಣೆ (ಇಸಿಜಿ), ಕೆಲವು ವಿಧದ ರಕ್ತ ಪರೀಕ್ಷೆಗಳು, ಕೆಲವು ವಿಧದ ಔಷಧಿ ವಿತರಣೆ, ಇನ್ನಿತರ ವೈದ್ಯಕೀಯ ಸೇವೆಗಳು ಶಿಬಿರದಲ್ಲಿ ಲಭ್ಯವಿದೆ. 

ಚಿಕಿತ್ಸೆಗಾಗಿ ಎ.ಜೆ. ಆಸ್ಪತ್ರೆಗೆ ಹೋದಲ್ಲಿ ಕೆಲವು ಚಿಕಿತ್ಸೆಗಳು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9611001000, 9480074482, 9535914259 ಸಂಪರ್ಕಿಸಬಹುದಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article