ಇಂಗ್ಲಿಷ್ ಚಾನೆಲ್ ಈಜು ರಿಲೇಯಲ್ಲಿ ಮಂಗಳೂರಿನ ವೈದ್ಯ
ಎವರೆಸ್ಟ್ ಪರ್ವತವನ್ನು ಏರುವುದು ಅದೆಷ್ಟು ಕ್ಲಿಷ್ಟಕರವೋ ಇಂಗ್ಲಿಷ್ ಚಾನೆಲ್ ಈಜುವುದೂ ಅಷ್ಟೇ ದುರ್ಗಮ ಎಂದು ಹೇಳಲಾಗುತ್ತದೆ. ಸಮುದ್ರದ ಉಪ್ಪು ನೀರು, ಅನಿರೀಕ್ಷಿತ ಹವಾಮಾನ, ಜತೆಗೆ ದೈತ್ಯಾಕಾರದ ಅಲೆಗಳೊಂದಿಗೆ ತೇಲುವ (ಈಜುವ)ಕಲೆಯನ್ನು ಅರಗಿಸಿಕೊಂಡವರು ಇಂಗ್ಲಿಷ್ ಚಾನೆಲ್‌ನಂತಹ ಸಮುದ್ರವನ್ನು ಈಜಲು ಸಾಧ್ಯವಾಗುತ್ತದೆ. ಅಂತಹ ಸಾಹಸಮಯ ಕಾರ್ಯವನ್ನು ಮಂಗಳೂರಿನ ಕಣಚೂರು ಆಸ್ಪತ್ರೆಯ ಆಂಕಾಲಜಿ ವೈದ್ಯ ಡಾ. ಗುರುಪ್ರಸಾದ್ ಮಾಡಿ ತೋರಿಸಿದ್ದಾರೆ.
ಪುತ್ರನಿಗೆ ಈಜು ಕಲಿಸುವ ಆಸಕ್ತಿಯೊಂದಿಗೆ ಈಜುಕೊಳದಲ್ಲಿ ತನ್ನ 40ರ ಹರೆಯದಲ್ಲಿ ಈಜು ಕಲಿತ ಅವರು ದಕ್ಷಿಣ ಇಂಗ್ಲೆಂಡ್‌ನ್ನು ಉತ್ತರ ಫ್ರಾನ್ಸ್‌ನಿಂದ ಬೇರ್ಪಡಿಸುವ ಅಟ್ಲಾಂಟಿಕ್ ಮಹಾಸಾಗರದ ಒಂದು ಭಾಗವಾದ ಇಂಗ್ಲಿಷ್ ಚಾನೆಲ್ ಈಜುವ ಮೂಲಕ ಅಪ್ರತಿಮ ಸಾಹಸ ಮೆರೆದಿದ್ದಾರೆ.
ಇಂಗ್ಲಿಷ್ ಚಾನೆಲ್ ಈಜಿದ ಅನುಭವವನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ಡಾ. ಗುರುಪ್ರಸಾದ್ ಭಟ್, ಜುಲೈ ೩ರಂದು ಬೆಳಗ್ಗೆ 1.30ಕ್ಕೆ ಆರು ಭಾರತೀಯ ಈಜುಗಾರರು 13 ಗಂಟೆ ಐದು ನಿಮಿಷಗಳ ಕಾಲ ಇಂಗ್ಲಿಷ್ ಚಾನೆಲ್ ಸಮುದ್ರವನ್ನು ಈಜುವ ಕಾರ್ಯವನ್ನು ದಾಖಲಿಸಿದ್ದು, ಆರು ಮಂದಿಯಲ್ಲಿ ನಾನೂ ಒಬ್ಬನಾಗಿದ್ದೆ.
ಭಾರತದ ಆರು ಮಂದಿಯ ತಂಡವು ಇಂಗ್ಲೆಂಡ್‌ನಿಂದ -ನ್ಸ್‌ನ ರಿಲೇ ಕ್ರಾಸಿಂಗ್‌ನ್ನು ಪೂರ್ಣಗೊಳಿಸಿದ್ದು, 13 ಗಂಟೆಗಳ ಅವಽಯಲ್ಲಿ ಪ್ರತಿ ಈಜುಗಾರರು ಎರಡರಿಂದ ಮೂರು ಗಂಟೆಗಳ ರಿಲೇ ಈಜು ಪೂರ್ಣಗೊಳಿಸಿದ್ದೇವೆ. ಇದೊಂದು ವಿಶೇಷ ಅನುಭವ ಎಂದರು.
ತಂಡದಲ್ಲಿ 14 ವರ್ಷದ ಅರ್ನವ್ ಜೌರಾ ಕಿರಿಯ ಸದಸ್ಯರಾಗಿದ್ದು 16 ವರ್ಷದ ದಿವ್ಯಾ ಹಿತೇಂದ್ರ ಮಹಾಜನ್ ಈಗಾಗಲೇ ಏಕವ್ಯಕ್ತಿ ಕ್ಯಾಟಲಿನಾ ಚಾನೆಲ್ ಈಜನ್ನು ಪೂರ್ತಿಗೊಳಿಸಿದವರು. 45 ವರ್ಷದ ರಘುನಂದನ್ ಗಂಗಪ್ಪ, ದೀಪಿಕಾ ರಾಣಾ, ಅಂಕಿತಾ ಕೊನ್ವರ್ ಅವರಿದ್ದು, ಈಜುವಿಕೆಯಲ್ಲಿನ ಪ್ರತಿಯೊಬ್ಬರ ಅನುಭವ, ವಿಶೇಷತೆಗಳು ತನಗೆ ವಿಶೇಷ ಸ್ಪೂರ್ತಿಯನ್ನು ನೀಡಿದೆ ಎಂದು ಅವರು ಹೇಳಿದರು.
ಭಾರತೀಯ ತಂಡವು 2025 ಸೆಪ್ಟಂಬರ್‌ನಲ್ಲಿ ಇಂಗ್ಲಿಷ್ ಚಾನೆಲ್ ಈಜುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಜುಲೈಗೆ ಮತ್ತೆ ನಿಗದಿ ಪಡಿಸಲಾಯಿತು. ತೆರೆದ ಸಮುದ್ರದಲ್ಲಿ ಈಜುವುದು ಹೊಸತೇನಲ್ಲ. ಆದರೆ ಇದೊಂದು ಸಾಹಸಮಯ ಹಾಗೂ ಹೊಸ ಅನುಭವಗಳನ್ನು ನೀಡುವ ಕಾರ್ಯ. ಈಜುವುದು ಕೇವಲ ಈಜುಕೊಳಕ್ಕೆ ಸೀಮಿತವಾಗುವ ಬದಲು ಈ ರೀತಿಯ ಸಮುದ್ರ, ಸಾಗರಗಳಲ್ಲಿ ಈಜುವುದಕ್ಕೂ ತೆರೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮಂಗಳೂರಿನ ಸಂತ ಅಲೋಶಿಯಸ್‌ನ ಈಜು ಕೊಳದಲ್ಲಿ ಆರಂಭಿಕವಾಗಿ ಮಗನೊಂದಿಗೆ ಈಜು ಕಲಿತೆ. ಮಗ ಈಜು ನಿಲ್ಲಿಸಿದರೂ ನಾನು ಮುಂದುವರಿಸಿ, ಸಮುದ್ರ ನೀರಿನತ್ತ ಹೆಜ್ಜೆ ಹಾಕಿದೆ. ಉದ್ಯಾವರದಲ್ಲಿ ಸಮುದ್ರ ನೀರಿನ ಅಭ್ಯಾಸ ಮಾಡಿಕೊಂಡು ಬಳಿಕ ತಣ್ಣೀರು ಬಾವಿಯ ಸಮುದ್ರದಲ್ಲಿ ಈಜು ಮುಂದುವರಿಸಿದೆ. ತರಬೇತುದಾರ ಅನುಭವಿ ಈಜುಗಾರ ಸಂಕೇತ್ ಬೆಂಗ್ರೆ, ಚೈತನ್ಯ ಅವರ ಮಾರ್ಗದರ್ಶದನದೊಂದಿಗೆ ಸಮುದ್ರ ಈಜು ಕಲೆಯ ಜತೆಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡ ಕಾರಣ ಇದೀಗ ಅಟ್ಲಾಂಟಿಕ್ ಸಾಗರದಲ್ಲಿ ಈಜುವುದು ಸಾಧ್ಯವಾಗಿದೆ ಎಂದು ಹೇಳಿದರು.
ಈಜುವಿಕೆಯ ಜತೆಗೆ ಡಾ. ಗುರುಪ್ರಸಾದ್ ಅವರು ಯುರೋಪಿನ ಅತಿ ಎತ್ತರದ ಪರ್ವ ಕೊಸಿಯುಸ್ಕೋ ಹತ್ತಿದ್ದಾರೆ. -ಸಿಫಿಕ್ ಸಾಗರ ಕ್ಯಾಟಲಿನಾ ಈಜು ಮತ್ತು ಅಟ್ಲಾಂಟಿಕ್ ಸಾಗರ ಇಂಗ್ಲಿಷ್ ಸಮುದ್ರ ಚಾನೆಲನ್ನು ಈಜುವ ಸಾಹಸವನ್ನು ತಮ್ಮ ದಾಖಲೆಯ ಗರಿಗಳಲ್ಲಿ ಸೇರಿಸಿಕೊಂಡಿದ್ದಾರೆ.
ಈಜು ತರಬೇತುದಾರ ಸಂಕೇತ್ ಬೆಂಗ್ರೆ ಉಪಸ್ಥಿತರಿದ್ದರು.