ಪರಿಶಿಷ್ಟರ ಕುಂದು ಕೊರತೆ: ಒಂದೂವರೆ  ವರ್ಷದಿಂದ ಸಭೆಯೇ ನಡಿದಿಲ್ಲ

ಪರಿಶಿಷ್ಟರ ಕುಂದು ಕೊರತೆ: ಒಂದೂವರೆ ವರ್ಷದಿಂದ ಸಭೆಯೇ ನಡಿದಿಲ್ಲ


ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಆಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಒಂದೂವರೆ ವರ್ಷದಿಂದ ಸಭೆಯನ್ನು ಕರೆದಿಲ್ಲ ಎಂದು ಪರಿಶಿಷ್ಟ ಸಮುದಾಯದ ಮುಖಂಡರು ಆರೋಪಿಸಿದರು. ಪರಿಶಿಷ್ಟ ಸಮುದಾಯದವರ ಸಮಸ್ಯೆಗಳ ಕುರಿತು ಚರ್ಚಿಸಲು ಜಿಲ್ಲಾಡಳಿತವು ಆದಷ್ಟು ಬೇಗ ಸಭೆಯನ್ನು ಏರ್ಪಡಿಸಬೇಕೆಂದು ಒತ್ತಾಯಿಸಿದರು.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್.ಎನ್ ಅಧ್ಯಕ್ಷತೆಯಲ್ಲಿ ಇಲ್ಲಿ ಭಾನುವಾರ ನಡೆದ ಪರಿಶಿಷ್ಟ ಸಮುದಾಯವರ ಅಹವಾಲು ಆಲಿಸುವ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮುಖಂಡ ಜಗದೀಶ್ ಪಾಂಡೇಶ್ವರ, ‘ಪರಶಿಷ್ಟರ ಸಮುದಾಯದವರು ಎದುರಿಸುತ್ತಿರುವ ಜಮೀನು ಸಂಬಂಧಿ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮಾತ್ರ ಬಗೆಹರಿಸಲು ಸಾಧ್ಯ. ಅವರು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರಿಶಿಷ್ಟರ ಕುಂದುಕೊರತೆ ಸಭೆ ಕರೆಯಬೇಕು’ ಎಂದರು.

‘ಬಿ.ಸಿ.ರೋಡ್ನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ಕಟ್ಟಡ ಶಿಥಿಲಗೊಂಡ ಕಾರಣ ಅದನ್ನು ಬೆಂಜನಪದವಿಗೆ ಸ್ಥಳಾಂತರಿಸಲಾಗಿದೆ. ಪಟ್ಟಣದಿಂದ ಬೆಂಜನಪದವು ದೂರವಿ ರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಮುಖಂಡ ವಿಶ್ವನಾಥ್ ಗಮನ ಸೆಳೆದರು.

‘ಜಮೀನು ಹಸ್ತಾಂತರ ಕೋರಿ ಕೆಲವು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಕಳುಹಿಸಲಾಗಿತ್ತು. ಇದುವರೆಗೆ ಪ್ರಗತಿಯಾಗಿಲ್ಲ’ ಎಂದು ಇಲಾಖೆ ಅಧಿಕಾರಿ ಯೊಬ್ಬರು ತಿಳಿಸಿದರು.

ಮುಖಂಡ ಎಸ್.ಪಿ ಆನಂದ್, ‘ನಗರದಲ್ಲಿ ವಿದ್ಯಾರ್ಥಿನಿಲಯಗಳ ಕೊರತೆಯಿಂದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದರು.

ಲೇಡಿಗೋಶನ್ ಆಸ್ಪತ್ರೆಯಿಂದ ಮಾರುಕಟ್ಟೆಯವರೆಗಿನ ರಸ್ತೆಯನ್ನು ಬೀದಿ ವ್ಯಾಪಾರಿಗಳು ಒತ್ತುವರಿ ಮಾಡಿ ಕೊಂಡಿದ್ದು, ಅದನ್ನು ತೆರವುಗೊಳಿಸುವಂತೆ ಎಸ್.ಪಿ.ಆನಂದ್ ಒತ್ತಾಯಿಸಿದರು.

ಜಿಲ್ಲೆಯಲ್ಲಿ 800 ಗೃಹರಕ್ಷಕ ಸಿಬ್ಬಂದಿ ಹೊಂದಲು ಅವಕಾಶ ಇದ್ದು, 120 ಹುದ್ದೆ ಖಾಲಿ ಇವೆ ಎಂದು ಹೆಚ್ಚುವರಿ ಪೊಲೀಸ್ ವರಷ್ಠಾಧಿಕಾರು ಅನಿಲ್ ಕುಮಾರ್ ಎಸ್.ಭೂಮರೆಡ್ಡಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article