ಜಿಲ್ಲಾಡಳಿತ ಮಳೆಗಾಲ ಎದುರಿಸಲು ಯಾವುದೇ ತಯಾರಿ ನಡೆಸಿಲ್ಲ: ಸಂತೋಷ್ ಬಜಾಲ್
Wednesday, July 1, 2026
ಮಂಗಳೂರು: ಜಿಲ್ಲಾಡಳಿತ ಈ ಬಾರಿಯ ಮಳೆಗಾಲ ಎದುರಿಸುವ ಬಗ್ಗೆ ತೆಗೆದುಕೊಳ್ಳುವ ಮುನ್ಸೂಚನಾ ಕ್ರಮ, ಎಚ್ಚರಿಕೆಗಳೆಲ್ಲವೂ ಕಚೇರಿಯಲ್ಲೇ ಕೂತು ಕೇವಲ ಪತ್ರಿಕಾ ಹೇಳಿಕೆಗಷ್ಟೇ ಸೀಮಿತಗೊಳಿಸಿದರೇ ಹೊರತು ಜನರ ಬಳಿಗೆ ತೆರಳಲೇ ಇಲ್ಲ. ಅಂತಹ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಜನರನ್ನು ಎಚ್ಚರಿಸುವ, ಬೇರೆಡೆಗೆ ಸ್ಥಳಾಂತರಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ ಎಂದು ದ.ಕ. ಜಿಲ್ಲಾ ಡಿವೈಎಫ್ ಐನ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರಕನ್ನಡದ ಶಿರೂರು, ಕೇರಳದ ವಯನಾಡು ದುರಂತದ ನಂತರ ಗುಡ್ಡ ಕುಸಿತ, ಇಳಿಜಾರು ಪ್ರದೇಶದ ಅಪಾಯಕಾರಿ ಮನೆಗಳನ್ನು ಗುರುತಿಸಿ ಸುರಕ್ಷಿತಾ ಸ್ಥಳಗಳಿಗೆ ತೆರಳಲು ಕ್ರಮಕೈಗೊಳ್ಳಬೇಕೆಂಬ ನಿರ್ದೇಶನವಿದ್ದರೂ ಈ ಕೆಲಸಗಳನ್ನು ಜಿಲ್ಲಾಡಳಿತದ ಯಾವೊಂದು ಇಲಾಖೆಗಳು ಮಾಡದಿರುವುದು ಖಂಡನೀಯ.
ನಾಗುರಿಯಲ್ಲಿ ಪ್ರಾಣವನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಗರಿಷ್ಟ ಪ್ರಮಾಣದ ಆರ್ಥಿಕ ಪರಿಹಾರ ಘೋಷಿಸಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಿಕೊಡಬೇಕು. ಸಂತ್ರಸ್ತ ನಾಲ್ಕೂ ಕುಟುಂಬಗಳು ಬಾಡಿಗೆ ಮನೆ ವಾಸಿಗಳು ಆಗಿರೋದರಿಂದ ಪಾಲಿಕೆ ಆಡಳಿತ ಸಂತ್ರಸ್ತ ಕುಟುಂಬಗಳಿಗೆ ಉಳಿದುಕೊಳ್ಳಲು ಪರ್ಯಾಯಾ ವ್ಯವಸ್ಥೆ ಹಾಗೂ ಮನೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕು.