ಮನೆಯ ಮೇಲೆ ಧರೆ ಕುಸಿದು ಮೂರು ಸಾವು, ಅಪಾರ ನಷ್ಟ: ಸೂಕ್ತ ಪರಿಹಾರ ಕ್ರಮಕ್ಕೆ ಡಿವೈಎಫ್ಐ ಒತ್ತಾಯ
ಕಳೆದ ವರುಷ ಉಳ್ಳಾಲ ತಾಲೂಕಿನ ಹಲವು ಭಾಗಗಳಲ್ಲಿ ಈ ರೀತಿ ಗುಡ್ಡಕುಸಿತದಂತಹ ಘಟನೆ ನಡೆದು ಸಾವು ನೋವು ಸಂಭವಿಸಿರುವ ಘಟನೆಗಳ ಕಹಿ ನೆನಪುಗಳು ಇನ್ನೂ ಮಾಸಿಲ್ಲ. ಸರಕಾರಗಳು ಇದರಿಂದ ಎಚ್ಚರಗೊಳ್ಳಲೂ ಇಲ್ಲ. ನಗರದ ಸಾವಿರಾರು ಜನ ಸ್ವಂತ ಮನೆ ಇಲ್ಲದೆ ಈ ರೀತಿ ಅಪಾಯಕಾರಿ ಸ್ಥಳಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ದಯನೀಯ ಪರಿಸ್ಥಿತಿ ಎದುರಾಗಿದ್ದರೂ ಸ್ಥಳೀಯ ಶಾಸಕರಿಗೆ, ಜನಪ್ರತಿನಿಧಿಗಳಿಗೆ ಜನ ಸಾಮಾನ್ಯರ ಬದುಕಿನ ಪ್ರಶ್ನೆಗಳ ಕಾಳಜಿಯೇ ಇಲ್ಲದಿರೋದು ದುರಂತ.
ಆದ್ದರಿಂದ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ನಾಗುರಿಯಲ್ಲಿ ಪ್ರಾಣವನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಗರಿಷ್ಟ ಪ್ರಮಾಣದ ಆರ್ಥಿಕ ಪರಿಹಾರ ಘೋಷಿಸಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಿಕೊಡಬೇಕು. ಸಂತ್ರಸ್ತ ನಾಲ್ಕೂ ಕುಟುಂಬಗಳು ಬಾಡಿಗೆ ಮನೆ ವಾಸಿಗಳು ಆಗಿರೋದರಿಂದ ಸದ್ಯ ಕುಟುಂಬಗಳಿಗೆ ಉಳಿದುಕೊಳ್ಳಲು ಪರ್ಯಾಯಾ ಮನೆ ವ್ಯವಸ್ಥೆ ಹಾಗೂ ಮನೆ ನಿವೇಶನ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಘಟನಾ ಸ್ಥಳಕ್ಕೆ ತೆರಳಿದ ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡರಾದ ದೀಪಕ್ ಬಜಾಲ್, ಯಶ್ ರಾಜ್ ಬಜಾಲ್, ಜಗದೀಶ್ ಬಜಾಲ್, ಧಿರಾಜ್ ಪಕ್ಕಲಡ್ಕ ಉಪಸ್ಥಿತರಿದ್ದರು.
