ಗಾಂಧಿ-ಕಾಂಗ್ರೆಸ್ ಭೂಸುಧಾರಣೆ ಆಡಳಿತದಿಂದಾಗಿ ಯಶ್‌ಪಾಲ್ ಸುವರ್ಣನ ಮನೆ ಜಮೀನು ಉಳಿದಿದೆ: ಕೆ.ಅಶ್ರಫ್

ಗಾಂಧಿ-ಕಾಂಗ್ರೆಸ್ ಭೂಸುಧಾರಣೆ ಆಡಳಿತದಿಂದಾಗಿ ಯಶ್‌ಪಾಲ್ ಸುವರ್ಣನ ಮನೆ ಜಮೀನು ಉಳಿದಿದೆ: ಕೆ.ಅಶ್ರಫ್

ಮಂಗಳೂರು: ಇತ್ತೀಚೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಗಾಂಧಿ ವಂಶಸ್ಥರನ್ನು ಧ್ವಂಸ ಮಾಡುತ್ತೇನೆ ಎಂಬಿತ್ಯಾದಿಯಾಗಿ ಬೊಬ್ಬಿರಿಸಿದ್ದು, ಗಾಂಧಿ, ಕಾಂಗ್ರೆಸ್, ಭೂಸುಧಾರಣೆ ಕಾಯ್ದೆ ಜಾರಿಯಿಂದಾಗಿ ಮತ್ತು ಕಾಂಗ್ರೆಸ್ ಆಡಳಿತದಿಂದಾಗಿ ಸುವರ್ಣ ತನ್ನ ಮನೆ, ಜಮೀನು ಉಳಿಸಿ ಕೊಂಡಿದ್ದಾನೆ. 

ಗಾಂಧಿ, ಕಾಂಗ್ರೆಸ್ ಆಡಳಿತ ಇಲ್ಲದೇ ಇರುತ್ತಿದ್ದರೆ ಯಶ್‌ಪಾಲ್ ಸುವರ್ಣ ಇಂದು ಬೀದಿ ಬಿಕಾರಿಯಾಗಿ ಆಂಡಲೆಯುವ ಸ್ಥಿತಿ ನಿರ್ಮಾಣವಾಗುತಿತ್ತು. ಭೂಸುಧಾರಣೆಯಲ್ಲಿ ಯಶ್‌ಪಾಲ್ ಸುವರ್ಣ ಕುಟುಂಬಕ್ಕೆ ಜಮೀನು ಲಭ್ಯವಾಗದೇ ಇದ್ದಿದ್ದರೆ, ಇಂದು ಸುವರ್ಣ, ತಾನು ಇತ್ತೀಚೆಗೆ ಬೊಬ್ಬೆ ಹಾಕಿದಂತೆ, ಬೀದಿಯಲ್ಲಿ ಪ್ರತಿದಿನ ಹುಚ್ಚು ಮಾತು ಆಡಿಕೊಂಡು ತಿರುಗಾಡಬೇಕಿತ್ತು. ಭೂಸುಧಾರಣೆ ಕಾಯ್ದೆಯ ಫಲದಿಂದಾಗಿ ಯಶ್‌ಪಾಲ್ ಸುವರ್ಣ ಇಂದು ಭೂಮಿ, ವ್ಯವಹಾರ, ಶಾಸಕನಾಗಿ ಇರುವುದಕ್ಕೆ ಗಾಂಧಿ, ಕಾಂಗ್ರೆಸ್ ಆಡಳಿತ ಕಾರಣ ಎಂದು ಅರಿಯಲಿ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article