ರೊಜಾರಿಯೊ ಕ್ಯಾಥೆಡ್ರಲ್‌ನಲ್ಲಿ ಹೃದಯ ಆರೋಗ್ಯ ಜಾಗೃತಿ ಉಪನ್ಯಾಸ ಹಾಗೂ ಸಿಪಿಆರ್ ತರಬೇತಿ

ರೊಜಾರಿಯೊ ಕ್ಯಾಥೆಡ್ರಲ್‌ನಲ್ಲಿ ಹೃದಯ ಆರೋಗ್ಯ ಜಾಗೃತಿ ಉಪನ್ಯಾಸ ಹಾಗೂ ಸಿಪಿಆರ್ ತರಬೇತಿ


ಮಂಗಳೂರು: ರೊಜಾರಿಯೊ ಕ್ಯಾಥೆಡ್ರಲ್‌ನ ಆರೋಗ್ಯ ಆಯೋಗವು, ಪ್ಯಾರಿಷ್ ಪಾಸ್ಟೋರಲ್ 21 ಆಯೋಗಗಳ ಮಾರ್ಗದರ್ಶನದಲ್ಲಿ, ‘ಎ ಹೆಲ್ದಿ ಹಾರ್ಟ್ ಆಫ್ ಎ ಬ್ಲಸ್ಡ್ ಲೈಫ್’ ಎಂಬ ಶೀರ್ಷಿಕೆಯಡಿ ಹೃದಯ ಆರೋಗ್ಯ ಜಾಗೃತಿ ಉಪನ್ಯಾಸ ಹಾಗೂ ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್) ತರಬೇತಿಯನ್ನು ಜು.12 ರಂದು ರೊಸಾರಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ವಯಸ್ಕರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹೃದಯದ ಆರೋಗ್ಯ ಕಾಪಾಡುವ ವಿಧಾನಗಳು ಹಾಗೂ ಹೃದಯಾಘಾತದಂತಹ ತುರ್ತು ಪರಿಸ್ಥಿತಿಗಳಲ್ಲಿ ಸಮಯೋಚಿತ ವೈದ್ಯಕೀಯ ನೆರವಿನ ಮಹತ್ವದ ಕುರಿತು ಮಾಹಿತಿ ಪಡೆದರು.


ಕಾರ್ಯಕ್ರಮದ ಮುಖ್ಯ ಉಪನ್ಯಾಸವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಶಾನನ್ ಫೆರ್ನಾಂಡಿಸ್ ಮಾತನಾಡಿ, ಹೃದಯ ರೋಗಗಳ ಪ್ರಮುಖ ಕಾರಣಗಳು, ಅಪಾಯದ ಅಂಶಗಳು, ತಡೆಗಟ್ಟುವ ಕ್ರಮಗಳು, ಆರೋಗ್ಯಕರ ಜೀವನಶೈಲಿ, ಹೃದಯಾಘಾತದ ಆರಂಭಿಕ ಲಕ್ಷಣಗಳು ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಅಗತ್ಯತೆಯ ಕುರಿತು ಅವರು ಸವಿಸ್ತಾರವಾಗಿ ವಿವರಿಸಿದರು. ಸಮತೋಲನ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಹಾಗೂ ಅವಧಿ ಅವಧಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವಂತೆ ಅವರು ಸಲಹೆ ನೀಡಿದರು.


ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಿಪಿಆರ್ ನೇರ ಪ್ರದರ್ಶನದಲ್ಲಿ, ಡಾ. ಶಾನನ್ ಫೆರ್ನಾಂಡಿಸ್ ಹಾಗೂ ಅವರ ತಂಡವು ಹೃದಯ ಸಂಬಂಧಿತ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ರೀತಿಯಲ್ಲಿ ಸಿಪಿಆರ್ ನೀಡುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ವೈದ್ಯಕೀಯ ಸಿಬ್ಬಂದಿ ಆಗಮಿಸುವ ಮೊದಲು ತಕ್ಷಣ ನೀಡುವ ಸಿಪಿಆರ್ ಜೀವ ಉಳಿಸುವ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂಬುದನ್ನು ಅವರು ವಿವರಿಸಿದರು.


ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿದ್ದವರು ಹೃದಯ ಆರೋಗ್ಯ, ರಕ್ತದೊತ್ತಡ, ಕೊಲೆಸ್ಟ್ರಾಲ್, ಮಧುಮೇಹ ಹಾಗೂ ತುರ್ತು ಚಿಕಿತ್ಸೆ ಕುರಿತು ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವ ಅವಕಾಶ ಪಡೆದರು.


ಆರೋಗ್ಯ ಆಯೋಗದ ಸಂಚಾಲಕ ಡಾ. ಸಿಸ್ಟರ್ ಸಾರಿತಾ ಡಿ’ಕುನ್ಹಾ ಅವರು ಸ್ವಾಗತಿಸಿದರು.


21 ಆಯೋಗಗಳ ಸಂಯೋಜಕ ಆಲ್ಡ್ರಿನ್ ವಾಜ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಿರಿಲ್ ರೊಸಾರಿಯೊ ಹಾಗೂ ಕಾರ್ಯದರ್ಶಿ ಇಡಾ ಫುರ್ಟಾಡೊ ಉಪಸ್ಥಿತರಿದ್ದರು.


ಸಿಸ್ಟರ್ ರೆಶ್ಮಾ ಡಿ’ಸೋಜಾ ವಂದಿಸಿ, ಅಮೂಲ್ಯವಾದ ಮಾಹಿತಿ ಹಂಚಿಕೊಂಡ ಡಾ. ಶಾನನ್ ಫೆರ್ನಾಂಡಿಸ್ ಅವರಿಗೆ ಹಾಗೂ ಉತ್ಸಾಹದಿಂದ ಭಾಗವಹಿಸಿದ ಎಲ್ಲಾ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಡೋರೀನ್ ಡಿ’ಸೋಜಾ ಅವರು ನಿರೂಪಿಸಿದರು.








Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article