ಪಣಪಿಲ ಕಟೀಲೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ
Sunday, July 12, 2026
ಮೂಡುಬಿದಿರೆ: ತಾಲೂಕಿನ ಪಣಪಿಲ ಕಾರ್ಯಕ್ಷೇತ್ರದ ಕಟೀಲೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಕೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಜನಜಾಗೃತಿ ವೇದಿಕೆಯ ಸದಸ್ಯರಾದ ಮುನಿರಾಜ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂಪ್ರದಾಯಿಕ ಆಹಾರ ಕ್ರಮದಲ್ಲಿ ಹೇರಳವಾಗಿ ಪೌಷ್ಟಿಕಾಂಶ ಸಿಗುತ್ತದೆ ಆದ್ದರಿಂದ ಇವುಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕೆಂದರು.
ಒಕ್ಕೂಟದ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು.
ವಲಯದ ಮೇಲ್ವಿಚಾರಕಿ ಪುಷ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹೇಮಾವತಿ ಹೆಗ್ಗಡೆ ಅವರ ಆಶಯದಂತೆ ಈ ಕಾರ್ಯಕ್ರಮ ಎಲ್ಲರ ಮನೆಯಲ್ಲಿ ಅನುಷ್ಠಾನ ಆಗಲಿ ಎಂದರು.
ಹಿರಿಯರಾದ ವಸಂತಿ ಅವರು ದಾಳಿಂಬೆ ಸಲಾಡನ್ನು ಯಾವ ರೀತಿಯಾಗಿ ಮಾಡುವುದು ಹಾಗೂ ಅದರ ಉಪಯೋಗ, ಕುರಿತು ಪ್ರಾತ್ಯಕ್ಷಕೆ ನಡೆಸಿದರು.
ಕೇಂದ್ರದ ಸದಸ್ಯರು ವಿವಿಧ ಬಗೆಯ ಪೌಷ್ಟಿಕಾಂಶಯುಕ್ತ ಆಹಾರವನ್ನು ತಯಾರಿಸಿ ಪ್ರದರ್ಶಿಸಿ ಬಹುಮಾನ ಪಡೆದುಕೊಂಡರು.
ಪಣಪಿಲ ಬಿ.ಒಕ್ಕೂಟದ ಅಧ್ಯಕ್ಷ ಸುಕೇಶ್, ಮಾಜಿ ಅಧ್ಯಕ್ಷ ಜಯ, ಸೇವಾಪ್ರತಿನಿ ಲತಾ ಜ್ಞಾನವಿಕಾಸ ಸದಸ್ಯರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನುತಾ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.