ಹಣ ಹೂಡಿಕೆ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು
Sunday, July 12, 2026
ಮಂಗಳೂರು: ವಾಟ್ಸ್‌ಆಪ್ ಮೂಲಕ ಸಂದೇಶವನ್ನು ನಂಬಿ ಹಣ ಹೂಡಿಕೆ ಮಾಡಿದ ವೃದ್ಧರೊಬ್ಬರು ವಂಚನೆಗೊಳಗಾದ ಘಟನೆ ವರದಿಯಾಗಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸ್‌ಆಪ್ ಮೂಲಕ ಸಂದೇಶವನ್ನು ನಂಬಿದ ತಾನು ಜೂ25ರಿಂದ ಜು.9ರವರೆಗೆ ಅಪರಿಚಿತರು ಹೇಳಿದ ಬೇರೆ ಬೇರೆ ಖಾತೆಗಳಿಗೆ 10,15,000 ರೂ.ಹಾಕಿದ್ದೆ. ವಂಚಕರು ತೋರಿಸಿದ ಆ?ಯಪ್‌ನಲ್ಲಿ ತನ್ನ ಹಣ 10,15,000 ರೂ. ಜಮಾವಣೆ ಆದಂತೆ ತೋರಿಸುತ್ತಿತ್ತು. ಅದನ್ನು ಹಿಂಪಡೆಯಲು ಮುಂದಾದಾಗ ಅಪರಿಚಿತ ವ್ಯಕ್ತಿಗಳು ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಸೂಚಿಸಿದರು. ಇದರಿಂದ ಅನುಮಾನಗೊಂಡ ತಾನು ಮಗಳ ಬಳಿ ತಿಳಿಸಿದ್ದು, ಬಳಿಕ ಮೋಸ ಹೋಗಿರುವುದಾಗಿ ತಿಳಿಯಿತು. ವಂಚಕರು 10,15,000 ರೂ.ವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ೬೮ರ ಹರೆಯದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.