ಆ್ಯಂಬುಲೆನ್ಸ್‌ನಲ್ಲಿ ಡ್ರಗ್ಸ್ ಸಪ್ಲೈ ದಂಧೆ-ಡ್ರಗ್‌ಪೆಡ್ಲರ್ ಶೋಕಿವಾಲಾ ಜಲೀಲ್ ಪತ್ತೆಗೆ ಪೊಲೀಸ್ ಶೋಧ
Sunday, July 26, 2026
ಮಂಗಳೂರು: ಇತ್ತೀಚೆಗೆ ಬಾಗಲಕೋಟೆಯಲ್ಲಿ ಐದು ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದ ಮಂಗಳೂರು ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶೋಕಿವಾಲಾ ಜಲೀಲ್ ಎಂಬಾತನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಬೆಳ್ತಂಗಡಿಯ ಬಾಬಾ ಆ್ಯಂಬುಲೆನ್ಸ್ ಚಾಲಕ ಜಲೀಲ್ ಎಂಬಾತನೂ ಈ ಡ್ರಗ್ಸ್ ದಂಧೆಯಲ್ಲಿ ಆರೋಪಿ ಎಂದು ಪೊಲೀಸ್ ತನಿಖೆಯಲ್ಲಿ ದೃಢಗೊಂಡಿದೆ. ಆದ್ದರಿಂದ ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ. ಸಮಾಜಸೇವೆಯ ಹೆಸರಿನಲ್ಲಿ ಸಾಚಾ ಎಂದು ಜಲೀಲ್ ತನ್ನನ್ನು ಬಿಂಬಿಸುತ್ತಿದ್ದ. ಆದರೆ ಈತ ಜಲೀಲ್ ಆ್ಯಂಬುಲೆನ್ಸ್‌ನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇದೀಗ ಪೊಲೀಸರು ತನ್ನ ಬೆನ್ನು ಬಿದ್ದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಜಲೀಲ್ ಮೊಬೈಲ್ ಸ್ವಿಚ್ ಆಫ್ ಮಾಡಿ ಆ್ಯಂಬುಲೆನ್ಸ್ ಜೊತೆಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಜಲೀಲ್ ಪತ್ತೆಗೆ ಕಣ್ಣಿಗೆ ಎಣ್ಣೆಬಿಟ್ಟು ಹುಡುಕಾಡುತ್ತಿದ್ದಾರೆ.