ದಲಿತ ಚಳುವಳಿಯ ನೇತಾರ ಎಂ. ದೇವದಾಸ್ ನಿಧನ

ದಲಿತ ಚಳುವಳಿಯ ನೇತಾರ ಎಂ. ದೇವದಾಸ್ ನಿಧನ


ಮಂಗಳೂರು: ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹಿರಿಯ ನಾಯಕ ಎಂ.ದೇವದಾಸ್ ಹೃದಯಾಘಾತದಿಂದ ಬುಧವಾರ ನಿಧನರಾದರು.

ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭಗೊಂಡಾಗ ಕರಾವಳಿ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಪ್ರಾರಂಭಿಸಲು ಎಂ. ದೇವದಾಸ್ ಶ್ರಮ ವಹಿಸಿದ್ದರು. ಜಿಲ್ಲೆಯಾದ್ಯಂತ ಸಂಘಟನೆ ಕಟ್ಟಲು ಓಡಾಡಿದ್ದರು. ದಲಿತ ಸಮುದಾಯದ ನಡುವೆ ವೈಚಾರಿಕ ಪ್ರಜ್ಞೆ, ಸ್ವಾಭಿಮಾನ ಮೂಡಿಸಲು ಬಹಳಷ್ಟು ಪ್ರಯತ್ನಿಸಿದ್ದರು. ಜಿಲ್ಲೆಯಲ್ಲಿ ಎಡಪಂಥೀಯ, ವೈಚಾರಿಕ ಸಂಘಟನೆಗಳ ಜೊತೆ ಸೇರಿ ಹಲವು ಹೋರಾಟಗಳು, ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಸಮಾನ ಮನಸ್ಕರ ವೇದಿಕೆಗಳು, ಜಂಟಿ ಹೋರಾಟಗಳನ್ನು ಸಂಘಟಿಸುವುದರಲ್ಲಿ ದೇವದಾಸ್ ಅವರು ಕೊಡುಗೆ ನೀಡಿದ್ದರು. ಹೊಸ ತಲೆಮಾರಿನ ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದರು. ಕರಾವಳಿ ಭಾಗದಲ್ಲಿ ಕೋಮುವಾದದ ವಿರುದ್ಧದ ಹೋರಾಟದಲ್ಲಿ, ದಲಿತರ, ಆದಿವಾಸಿಗಳ, ಶೋಷಿತರ ಪರವಾದ ಹೋರಾಟದಲ್ಲಿ ಸದಾ ಸಕ್ರಿಯರಾಗಿದ್ದರು.

ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ವರ್ಗವನ್ನು ಆಗಲಿದ್ದಾರೆ.

ಸಂತಾಪ..

ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಪಿ. ವಿ. ಮೋಹನ್ ಸೇರಿದಂತೆ ವಿವಿಧ ಸಮಾನ ಮನಸ್ಕ ಸಂಘಟನೆಗಳ ಮುಂದಾಳುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article