‘ಎಸ್‌ಐಆರ್‌ನಿಂದ ನೈಜ ಮತದಾರರು ಹೊರಗುಳಿಯಬಾರದು’: ಐವನ್

‘ಎಸ್‌ಐಆರ್‌ನಿಂದ ನೈಜ ಮತದಾರರು ಹೊರಗುಳಿಯಬಾರದು’: ಐವನ್

ಮಂಗಳೂರು: ಎಸ್‌ಐಆರ್‌ನ್ನು ಕೆಲವು ಕಾರಣಗಳಿಂದ ನಾವು ವಿರೋಧಿಸುತ್ತೇವೆ. ಆದರೆ ಜನರ ಹಿತದೃಷ್ಟಿಯಿಂದ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.

ತನ್ನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 34,000 ಬೂತ್‌ಗಳಲ್ಲಿಯೂ ಬಿಎಲ್‌ಎ 2ಗಳನ್ನು ನೇಮಕ ಮಾಡಿ ಅವರ ಮೂಲಕ ಬಿಎಲ್‌ಒಗಳಿಗೆ ಸಹಕಾರ ನೀಡುವ ಮೂಲಕ ಎಸ್‌ಐಆರ್ ಯಶಸ್ಸಿಗೆ ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಎಸ್‌ಐಆರ್‌ಗೆ ಸಹಕರಿಸುವುದಿಲ್ಲ. ಜನರಿಗೆ ಸಹಕಾರ ನೀಡಿ ನೈಜ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೆ ಮುಂದಾಗದು. ಅದರ ಲಾಭ ಪಡೆಯಬಹುದು ಎಂದು ಬಿಜೆಪಿ ಅನಿಸಿತ್ತು. ಅದಕ್ಕಾಗಿ ಬಿಜೆಪಿ ಚುನಾವಣಾ ಆಯುಕ್ತರನ್ನು ಭೇಟಿ ಮಾಡುತ್ತಿದೆ. ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುತ್ತಿದೆ. ಕೇಂದ್ರ ಸರಕಾರದ ಮಂತ್ರಿಗಳು ನ್ಯೂನತೆ ಎಂದು ಆರೋಪಿಸಿದರೆ ಎಸ್‌ಐಆರ್‌ನ್ನು ನಡೆಸುತ್ತಿರುವ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದಂತೆ. ಚುನಾವಣಾ ಆಯೋಗಕ್ಕೆ ರಾಜ್ಯ ಸರಕಾರ ಅಗತ್ಯ ಅಧಿಕಾರಿ, ಸಿಬ್ಬಂದಿ ಬಲವನ್ನು ನೀಡಿ ಸಹಕಾರ ನೀಡಿದೆ. ಬಿಜೆಪಿಯವರಿಗೆ ಅಧಿಕಾರಿಗಳ ಮೇಲೆಯೇ ಸಂಶಯದ ವಾತಾರವಣ ಸೃಷ್ಟಿಸಲಾಗಿದೆ ಎಂದವರು ಆಕ್ಷೇಪಿಸಿದರು.

ಖಾಯಂ ವಾಸಸ್ಥಳ ಪ್ರಮಾಣ ಪತ್ರ (ಪಿಆರ್‌ಸು)ವನ್ನು ಸಿಕ್ಕ ಸಿಕ್ಕವರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪಿಆರ್ಸಿ ಹೊಸತಾಗಿ ನೀಡುತ್ತಿರುವುದು ಅಥವಾ ಹೊಸ ಕಾಯಿದೆ ಏನೂ ತರಲಾಗಿಲ್ಲ. ಯಾರಿಗೆ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ ಇರುವ, ಖಾಯಂ ವಾಸಸ್ಥಳ ಹೊಂದಿರುವವರ ದಾಖಲೆ ಪಡೆದು ವಿಎಯಿಂದ ದೃಢೀಕರಣಗೊಂಡು ಆರ್‌ಐಯಿಂದ ತಹಶೀಲ್ದಾರ್ ನೀಡುವಂತದ್ದು. ಜನಸಾಮಾನ್ಯರು ಈ ಪಿಆರ್‌ಸಿಗಾಗಿ ಅಲೆದಾಟ ತಪ್ಪಿಸಲು ಪಿಡಿಒ ಮೂಲಕ ನೀಡಲು ಅವಕಾಶ ನೀಡಿ ಸರಳೀಕರಣಗೊಳಿಸಲಾಗಿದೆ. ಯಾವುದೇ ಒಬ್ಬ ಮತದಾರನ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಾಗ ಆತ ಆಯೋಗಕ್ಕೆ ಒದಗಿಸಬಹುದಾದ 11 ದಾಖಲೆಗಳಲ್ಲಿ ಈ ಪಿಆರ್‌ಸಿಯೂ ಸೇರಿದೆ. ಅಂತಹದರಲ್ಲಿ ಬಾಂಗ್ಲಾದೇಶಿಯರನ್ನು ಪಟ್ಟಿಗೆ ಸೇರಿಸಲು ಈ ಪಿಆರ್‌ಸಿ ನೀಡಲಾಗುತ್ತಿದೆ ಎಂಬ ಆರೋಪ ಮಾಡುವವರು ಅದನ್ನು ಸಾಬೀತುಪಡಿಸಿ. ವಿನಾ ಕಾರಣ ಆರೋಪ ಮಾಡುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದವರು ಹೇಳಿದರು. 

ಬಿಎಲ್‌ಒಗಳಿಗೆ ಎಸ್‌ಐಆರ್ ಎನ್ಯುಮರೇಶನ್ ಫಾರಂ ಭರ್ತಿ ಮಾಡಲು ಸಾಕಷ್ಟು ಗೊಂದಲವಿದೆ, ಕಷ್ಟವಿದೆ. ಹಾಗಾಗಿ ಅಲ್ಲಲ್ಲಿ ಜನರನ್ನು ಸೇರಿಸಿ ಫಾರಂ ಭರ್ತಿ ಮಾಡಲು ಸಹಕಾರ ನೀಡುವ ಕೆಲಸವನ್ನು ಬಿಎಲ್‌ಎ2ಗಳ ಮೂಲಕ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಡಿ ಶೇ. ೧೧ರಷ್ಟು ಮಾತ್ರವೇ ಎನ್ಯುಮರೇಶನ್ ಫಾರಂ ಹಿಂದಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಕೆಲವರು ವ್ಯಾಪಾರಕ್ಕಾಗಿ ಇಲ್ಲಿಗೆ ಬಂದವರು ಎರಡು ಮೂರು ಕಡೆ ಮತದಾರರ ಗುರುತಿನ ಚೀಟಿ ಹೊಂದಿರುವುದು, ಅಂತಹವರಿಗೆ ಸಹಕಾರ ನೀಡುವುದು. ಕೆಲವರು ಬಾಡಿಗೆ ಮನೆ ಬಿಟ್ಟು ಹೋಗಿದ್ದು, ಅಲ್ಲಿ ಬೇರೆಯವರು ಬಂದಿದ್ದರೂ ಹಿಂದಿನವರ ಫಾರಂ ಪಡೆದು ಅದನ್ನು ಭರ್ತಿ ಮಾಡಿ ನೀಡಬೇಕೆಂಬ ಒತ್ತಡವನ್ನೂ ಅಧಿಕಾರಿಗಳ ಮೇಲೆ ಹಾಕುತ್ತಿರುವುದು ನನ್ನ ಗಮನದಲ್ಲಿದ್ದು, ಈಗ ಆ ಬಗ್ಗೆ ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ಆದರೆ ಕರಡು ಮತದಾರರ ಪಟ್ಟಿ ಹೊರಬಂದಾಗ ಅದನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು. 

ಕಾಂಗ್ರೆಸ್ ಮುಖಂಡರಾದ ಅಪ್ಪಿ, ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ನಾಗೇಂದ್ರ ಕುಮಾರ್, ಭಾಸ್ಕರ ರಾವ್, ಸತೀಶ್ ಪೆಂಗಲ್, ಜೇಮ್ಸ್ ಪ್ರವೀಣ್, ಆಲ್ಟನ್ ಡಿಕುನ್ಹಾ, ಇಮ್ರಾನ್, ಮನೀಶ್ ಬೋಳಾರ್, ಮನೋಜ್ ಎಂ.ಪಿ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article