ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೊದಲ ರೊಬೋಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆ: ವೈದ್ಯಕೀಯ ಸಾಧನೆಯ ಮೈಲಿಗಲ್ಲು

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೊದಲ ರೊಬೋಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆ: ವೈದ್ಯಕೀಯ ಸಾಧನೆಯ ಮೈಲಿಗಲ್ಲು


ಮಂಗಳೂರು: ಕರಾವಳಿ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ (ಎಫ್‌ಎಂಸಿಐ) ಅಧೀನದ ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರೋಬೋಟ್ ನೆರವಿನ ಸಂಪೂರ್ಣ ಮಂಡಿ ಕೀಲು ಬದಲಿ (ರೋಬೋಟಿಕ್ ಟೋಟಲ್ ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.


ಅಮೆರಿಕದ ಸ್ಟ್ರೈಕರ್ ಸಂಸ್ಥೆಯ ಮಾಕೋ ಸ್ಮಾರ್ಟ್‌ರೋಬೋಟಿಕ್ಸ್ ಸೌಲಭ್ಯ ಬಳಸಿಕೊಂಡು ಸೋಮವಾರ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು.

ಮೂಳೆಸಂಧಿವಾತ (ಆಸ್ಟಿಯೋ ಆರ್‌ಥ್ರೈಟಿಸ್)ದಿಂದ ಬಳಲುತ್ತಿದ್ದ ರೋಗಿಗೆ ಮೂಳೆ ಮತ್ತು ಕೀಲು ತಜ್ಞ ಡಾ. ಪ್ರಶಾಂತ್ ಆಚಾರ್ಯ ನೇತೃತ್ವದ ಮೂಳೆರೋಗ ತಜ್ಞರು ಹಾಗೂ ಅರಿವಳಿಕೆ ತಜ್ಞರ ತಂಡ ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಸಾಂಪ್ರದಾಯಿಕ ಮಂಡಿ ಕೀಲು ಬದಲಿ ಶಸ್ತ್ರಚಿಕಿತ್ಸೆಗಿಂತ ಭಿನ್ನವಾಗಿ, ರೋಬೋಟಿಕ್ ತಂತ್ರಜ್ಞಾನವು ರೋಗಿಯ ಮಂಡಿಯ ರಚನೆಯನ್ನು 3ಡಿ ಮಾದರಿಯಲ್ಲಿ ನಿಖರವಾಗಿ ವಿಶ್ಲೇಷಿಸಿ, ಕೃತಕ ಕೀಲನ್ನು ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಲು ನೆರವಾಗುತ್ತದೆ. ಈ ಸಾಧನೆಗೆ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕ ವಂ. ಫೌಸ್ಟಿನ್ ಲೂಕಾಸ್ ಲೋಬೋ ಅವರು ವೈದ್ಯರ ತಂಡವನ್ನು ಅಭಿನಂದಿಸಿದ್ದಾರೆ.

ನೂತನವಾಗಿ ಅಳವಡಿಸಿರುವ ಸ್ಮಾರ್ಟ್ ರೋಬೋಟಿಕ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸಿರುವುದು ಸಂಸ್ಥೆಯ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article