ಉಸ್ತಾದ್ ಮೇಲೆ ಹಲ್ಲೆ: ಪ್ರಕರಣ ದಾಖಲು

ಉಸ್ತಾದ್ ಮೇಲೆ ಹಲ್ಲೆ: ಪ್ರಕರಣ ದಾಖಲು

ಮಂಗಳೂರು: ಸುರತ್ಕಲ್ ಬಳಿಯ ಮಸೀದಿಯೊಂದಕ್ಕೆ ಏಕಾಏಕಿ ನುಗ್ಗಿ ಅಲ್ಲಿನ ಮದ್ರಸಾ ಉಸ್ತಾದ್ ಗೆ ಹಲ್ಲೆಗೈದು ಬಹಿರಂಗವಾಗಿ ಕೊಲೆ ಬೆದರಿಕೆ ಒಡ್ಡಿದ ಘಟನೆಯ ವಿಡಿಯೋ ವೈರಲ್ ಆಗಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸುರತ್ಕಲ್ ಬಳಿಯ ಕಾಟಿಪಳ್ಳದ ಅಲ್ ಬದ್ರಿಯಾ ಮದರಸದಲ್ಲಿ ಘಟನೆ ನಡೆದಿದ್ದು ಬಾಲಕನಿಗೆ ಬೆತ್ತದಲ್ಲಿ ಛಡಿಯೇಟು ನೀಡಿದ ಸಿಟ್ಟಿನಿಂದ ಮದರಸಾದಲ್ಲಿ ಶಿಕ್ಷಕನಾಗಿರುವ ಉಸ್ತಾದ್ ಉಮರ್ ಫಾರೂಕ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಕಾಟಿಪಳ್ಳ ನಿವಾಸಿ ಸಂಶುದ್ದೀನ್ ಹಾಗೂ ಆತನ ಪತ್ನಿ ಉಸ್ತಾದ್ ಉಮರ್ ಫಾರೂಕ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಪ್ರಕರಣ ದಾಖಲಾಗಿದೆ. 

ಮದರಸದಲ್ಲಿ 12 ವರ್ಷದ ಬಾಲಕನಿಗೆ ಉಸ್ತಾದ್ ಉಮರ್ ಫಾರೂಕ್ ಬೆತ್ತದಿಂದ ಹೊಡೆದಿದ್ದು ಇದರ ಸಿಟ್ಟಿನಿಂದ ಉಸ್ತಾದ್ ಮೇಲೆ ಹಲ್ಲೆ ನಡೆಸಲಾಗಿತ್ತು. ಏಕಾಏಕಿ ಮದರಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದು ಇದರ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬದ್ರಿಯಾ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಎಂ.ಎ ಹನೀಫ್ ನೀಡಿದ ದೂರಿನ ಅನ್ವಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸಂಶುದ್ದಿನ್ ಹಾಗೂ ಆತನ ಪತ್ನಿಯ ವಿರುದ್ದ ಪ್ರಕರಣ ದಾಖಲಾಗಿದೆ. BNS ಕಲಂ: 329(1), 115(2), 352, 351(2), 351(3), 3(5) ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article