‘ಸ್ವಚ್ಛತೆ ನಮ್ಮಿಂದ ಆರಂಭವಾಗಲಿ’: ಮಂದಾರ ವಿ. ಕಾಲೆ

‘ಸ್ವಚ್ಛತೆ ನಮ್ಮಿಂದ ಆರಂಭವಾಗಲಿ’: ಮಂದಾರ ವಿ. ಕಾಲೆ


ಮಂಗಳೂರು: ಸ್ವಚ್ಚತೆ ಎಂಬುವುದು ನಮ್ಮಿಂದಲೇ ಪ್ರಾರಂಭವಾಗಬೇಕು ಈ ಮೂಲಕ ಗ್ರಾಮ ರಾಜ್ಯ ದೇಶ ಸ್ವಚ್ಚತೆಯಿಂದಿರಲು ಸಾದ್ಯ ಎಂದು ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ. ಕಾಲೆ ಹೇಳಿದರು.

ಅವರು ಎಂ.ಆರ್.ಪಿ.ಎಲ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಗೋವಿಂದದಾಸ ಪದವಿ ಪೂರ್ವ ಕಾಲೇಜು ಸುರತ್ಕಲ್ ವತಿಯಿಂದ, ಎಂ.ಆರ್.ಪಿ.ಎಲ್ ಸಂಸ್ಥೆಯ ವತಿಯಿಂದ 15 ದಿನಗಳ ಕಾಲ ನಡೇಯುವ ಸ್ವಚ್ಚತಾ ಪಕ್ವಾಡದ ಅಂಗವಾಗಿ ಸುರತ್ಕಲ್ ನಲ್ಲಿ ನಡೆದ ಸ್ವಚ್ಚತಾ ಜಾಥ ಮತ್ತು ಬೀದಿ ನಾಟಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು.

ಸ್ವಚ್ಛತೆಯ ಬಗ್ಗೆ ಜನರಿಗೆ ತಿಳಿದಿದೆ ಆದರೆ ಬೇಜಾವಾಬ್ದಾರಿ ತನದಿಂದ ಪರಿಸರ ಕೆಡುತ್ತಿದೆ, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬುದು ಮನಸಿನಲ್ಲಿರಬೇಕು, ಜನ ಆರೋಗ್ಯದಿಂದ ಇರಬೇಕಾದರೆ ಪರಿಸರ ಸ್ವಚತೆಯಿಂದ ಇರಬೇಕು ಎಂದರು. ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಸುರತ್ಕಲ್ ಜಂಕ್ಷನ್ ವರೆಗೆ ಸ್ವಚ್ಚತಾ ಜಾಥ ನಂತರ ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕ ಹಮ್ಮಿಕೊಂದರು. 

ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ವಿಭಾಗದ ಅಧಿಕಾರಿ ಕೇಶವ ಪಾಟಾಳಿ, ಕಾಲೇಜು ಪ್ರಾಂಶುಪಾಲೆ ಲಕ್ಷೀ, ಸುರತ್ಕಲ್ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಾಜ್ ಮೋಹನ್ ರಾವ್ ಕಾರ್ಯದರ್ಶಿ ಸತೀಶ್ ಸದಾನಂದ, ಕಾಲೇಜು ವಿದ್ಯಾರ್ಥಿ ಸೇವಾ ಪಾಲಕ ವೆಂಕಟರಮಣ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article