ಜು.17ರಂದು ಮೂಡುಬಿದಿರೆಯಲ್ಲಿ 29ನೇ ವಷ೯ದ ಯಕ್ಷ ಸಂಭ್ರಮ: ಯಕ್ಷದೇವ ಪ್ರಶಸ್ತಿ ಪ್ರದಾನ

ಜು.17ರಂದು ಮೂಡುಬಿದಿರೆಯಲ್ಲಿ 29ನೇ ವಷ೯ದ ಯಕ್ಷ ಸಂಭ್ರಮ: ಯಕ್ಷದೇವ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಯಕ್ಷದೇವ ಮಿತ್ರಮಂಡಳಿ ಬೆಳುವಾಯಿ ಇದರ ಆಶ್ರಯದಲ್ಲಿ 29ನೇ ವರ್ಷದ ಯಕ್ಷಸಂಭ್ರಮವು ಜು. 17ರಂದು  ಪ್ರೀತಮ್ ಗಾರ್ಡನ್ ಹಾಲ್ ನ ಕಲಾವಿದ ಮಿಜಾರು ದಿ/ಕೆ. ಸುಬ್ರಾಯ ಭಟ್ ಕಲಾ ವೇದಿಕೆಯಲ್ಲಿ ನಡೆಯಲಿದೆ.

ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಎಡನೀರು ಮಠ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀವ೯ಚನ ನೀಡಲಿದ್ದು, ಕಣಾ೯ಟಕ ಬ್ಯಾಂಕಿನ ಕಾಯ೯ನಿವ೯ಹಣಾಧಿಕಾರಿ ರಾಘವೇಂದ್ರ ಎಸ್. ಭಟ್ ಉದ್ಘಾಟಿಸಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. 

ಕಟೀಲಿನ ಅನುವಂಶಿಕ ಅಚ೯ಕರಾದ ವೇದಮೂತಿ೯ ಅನಂತ ಪದ್ಮನಾಭ ಅಸ್ರಣ್ಣ ಘನ ಉಪಸ್ಥಿತರಿದ್ದು, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಎಸ್. ಕೆ. ಎಫ್. ಸಂಸ್ಥೆಯ ಎಂ. ಡಿ. ರಾಮಕೃಷ್ಣ ಆಚಾಯ೯, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್,  ಬಿಜೆಪಿ ಮುಖಂಡ ಸುದಶ೯ನ್ ಎಂ., ಬೆಳುವಾಯಿ ಸಿ. ಎ. ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಬಪ್ಪನಾಡು ಲಯನ್ಸ್ ಕ್ಲಬ್ಬಿನ ಇನ್ಸ್ ಪಾಯರ್ ಬಿ. ಶಿವ ಪ್ರಸಾದ್, ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಬೆಳುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಶ್ರೀ ವನಜಾಕ್ಷಿ ಅಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಳಮದ್ದಳೆ ಅಥ೯ದಾರಿ ಪೂಣಿ೯ಮಾ ಪೇಜಾವರ ಅವರಿಗೆ ಸನ್ಮಾನ, ಹಾಲಾಡಿ, ಪೆಡೂ೯ರು ಮೇಳದ ವ್ಯವಸ್ಥಾಪಕರಾಗಿರುವ ಕರುಣಾಕರ ಶೆಟ್ಟಿ ವೈ., ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ ಪುತ್ತೂರು ಅವರಿಗೆ ಶ್ರೀ 'ಯಕ್ಷ ದೇವ ಪ್ರಶಸ್ತಿ-2026' ಪ್ರಧಾನ ನಡೆಯಲಿದೆ.

ಇದಕ್ಕೂ ಮೊದಲು ಮಧ್ಯಾಹ್ನ 2.00ಗಂಟೆಯಿಂದ ನಂದಳಿಕೆ ವಿಶಾಲ ಯಕ್ಷಕಲಾ ಬಳಗದಿಂದ ಯಕ್ಷಗಾನ ತಾಳಮದ್ದಳೆ ಕಣಾ೯ವಸಾನ ಹಾಗೂ ಸಂಜೆ 6.00ಗಂಟೆಯಿಂದ ಶ್ರೀ ಕ್ಷೇತ್ರ ಹಾಲಾಡಿ ದುಗಾ೯ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ 'ಪಂಜರದ ಪಕ್ಷಿ' ಯಕ್ಷಗಾನ ಪ್ರದಶ೯ನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article