'ಬೆದ್ರದ ಕೃಷ್ಣೋತ್ಸವ -2026'ರ ಆಮಂತ್ರಣ ಪತ್ರಿಕೆ ಬಿಡುಗಡೆ

'ಬೆದ್ರದ ಕೃಷ್ಣೋತ್ಸವ -2026'ರ ಆಮಂತ್ರಣ ಪತ್ರಿಕೆ ಬಿಡುಗಡೆ


ಮೂಡುಬಿದಿರೆ: ಬೆದ್ರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ(ರಿ.) ಸಂಘಟನೆ ನಡೆಸುವ 'ಬೆದ್ರದ ಕೃಷ್ಣೋತ್ಸವ -2026'ರ ಆಮಂತ್ರಣ ಪತ್ರಿಕೆಯ ಬಿಡುಗಡೆ ಪುತ್ತಿಗೆಯ 'ಶ್ರೀ ಸೋಮನಾಥೇಶ್ವರ,ಮಹಿಷ ಮರ್ದಿನಿ' ಸನ್ನಿಧಿಯಲ್ಲಿ  ದೇವರಿಗೆ ಫಲ-ಪುಷ್ಪ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. 


ಕಾರ್ಯಕ್ರಮದಲ್ಲಿ ಪುತ್ತಿಗೆ ದೇವಸ್ಥಾನದ ಅನುವಂಶಿಕ ಮುಖ್ಯಸ್ಥರಾದ ಕುಲದೀಪ್ ಎಂ, ಕೆ.ಪಿ ಜಗದೀಶ್ ಅಧಿಕಾರಿ, ಉದ್ಯಮಿ ರಾಜೇಂದ್ರ ಜೈನ್, ಅಜಯ್ ದೀಕ್ಷಿತ್ ಶೆಟ್ಟಿ, ರಂಜಿತ್ ಪೂಜಾರಿ ತೋಡಾರು, ಸೂರಜ್ ಮಾನಾ೯ಡ್ , ನಾಗರಾಜ್ ಪೂಜಾರಿ, ರವಿ ಪೂಜಾರಿ, ಗಂಗಾಧರ ಶೆಟ್ಟಿ, ಶೋಭಾ ಶೆಟ್ಟಿ, ಪ್ರಶಾಂತ್ ಗುರುಸ್ವಾಮಿ, ರಾಜೇಶ್ ಕೋಟೆಗಾರ್, ಜವನೆರ್ ಬೆದ್ರ ಸಂಘಟನೆಯ ಸಂಸ್ಥಾಪಕರಾದ ಅಮರ ಕೋಟೆ, ಕಾರ್ಯದರ್ಶಿ ದಿನೇಶ್ ನಾಯಕ್, ಅಬ್ಬಕ್ಕ ಬ್ರಿಗೇಡ್ ಕಾರ್ಯದರ್ಶಿ ರಮ್ಯಾ ದಿನೇಶ್, ನಿಕಟಪೂರ್ವ ಸಂಚಾಲಕಿ ಸಹನಾ ನಾಯಕ್, ರಂಜಿತ್ ಶೆಟ್ಟಿ, ನಾರಾಯಣ ಪದ್ಮಲೆ, ಗಣೇಶ್ ಪೈ, ಮನು ಎಸ್ ಒಂಟಿಕಟ್ಟೆ, ರಾಜೇಶ್ ಕೆಲ್ಲಪುತ್ತಿಗೆ, ಸುಮಂತ್ ಶೆಟ್ಟಿ, ಸುದರ್ಶನ್, ಅಬ್ಬಕ್ಕ ಬ್ರಿಗೇಡ್ ಸದಸ್ಯರಾದ ಪ್ರೇಮ ಚಂದ್ರಶೇಖರ್ ರಾವ್, ಸುಕನ್ಯ, ಸೌಮ್ಯ ಗಣೇಶ್, ವಾರಿಜ, ಲಕ್ಷ್ಮಿ ಭಟ್, ವಿದ್ಯಾ, ಶಾಂತ, ರಾಧಾ, ಶ್ರೇಯಾ  ಮತ್ತಿತರರು ಭಾಗವಹಿಸಿದ್ದರು.

ಸಂದೀಪ್ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article