ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ
ಮೂಡುಬಿದಿರೆ: ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಬ್ಯಾಂಕ್ ಪರವಾಗಿ ಮಹತ್ವದ ತೀರ್ಪು ನೀಡಿರುವ ಇಲ್ಲಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ. ಎ ಅವರು ಆರೋಪಿಯನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ್ದಾರೆ.
ಕಾರ್ಪೊರೇಷನ್ ಬ್ಯಾಂಕ್, ಮೂಡುಬಿದಿರೆ ಶಾಖೆ (ಪ್ರಸ್ತುತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ) ವತಿಯಿಂದ ದಾಖಲಿಸಲಾಗಿದ್ದ ಸಿ.ಸಿ. ನಂ. 685/2017 ಪ್ರಕರಣದಲ್ಲಿ, ಆರೋಪಿಯಾಗಿದ್ದ ಸಂತೋಷ್ ಕುಮಾರ್ ಅವರು ನೀಡಿದ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆ ನಡೆಸಿ, ನೆಗೋಶಿಯಬಲ್ ಇನ್‌ಸ್ಟುçಮೆಂಟ್ಸ್ ಕಾಯ್ದೆ, 1881ರ ಕಲಂ 138ರಡಿ ಆರೋಪಿಯನ್ನು ದೋಷಿ ಎಂದು ಘೋಷಿಸಿದೆ.
ನ್ಯಾಯಾಲಯವು ಆರೋಪಿಗೆ ರೂ 4.60ಲಕ್ಷವನ್ನು ದೂರು ಸಲ್ಲಿಸಿದ ದಿನಾಂಕದಿಂದ ಮೊತ್ತ ವಸೂಲಿಯಾಗುವವರೆಗೆ ವಾರ್ಷಿಕ 6% ಬಡ್ಡಿ, ಹಾಗೂ ರೂ 3 ಸಾವಿರ ರಾಜ್ಯ ವೆಚ್ಚ ಪಾವತಿಸುವಂತೆ ಆದೇಶಿಸಿದೆ. ದಂಡದ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದೆ. ಅಲ್ಲದೆ, ಆರೋಪಿಯ ಜಾಮೀನು ಹಾಗೂ ಶ್ಯೂರಿಟಿ ಬಾಂಡ್‌ಗಳನ್ನು ರದ್ದುಗೊಳಿಸಿದೆ.
ಬ್ಯಾಂಕ್ ಪರವಾಗಿ ನ್ಯಾಯವಾದಿ ಹಾಗೂ ನೋಟರಿ ಶ್ವೇತಾ ಜೈನ್ ವಾದಿಸಿದ್ದರು.