ದ.ಕ. ಹೆಗ್ಗಡೆ ಸಮಾಜದಿಂದ ಆಟಿದ ಕೂಟ -2026

ದ.ಕ. ಹೆಗ್ಗಡೆ ಸಮಾಜದಿಂದ ಆಟಿದ ಕೂಟ -2026


ಮೂಡುಬಿದಿರೆ: ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಹಾಗೂ ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಇವುಗಳ ಜಂಟಿ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಭಾನುವಾರ ವೀರಮಾರುತಿ ದೇವಸ್ಥಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಕುಮಾರ್ ಹೆಗ್ಡೆ ಗುಂಡೂರಿ ನಮ್ನ ಸಂಸ್ಕೃತಿಯನ್ನು ಉಳಿಸುವ ಇಂತಹ ಕಾರ್ಯಕ್ರಮದಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. 

ದ.ಕ. ಜಿಲ್ಲಾ ಹೆಗ್ಗಡೆ ಸಮಾಜ  ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಟಿ ದಿನಗಳ ಕಷ್ಟದ ಬದುಕುಗಳು, ಆಗಿನ ತಿನಿಸುಗಳಲ್ಲಿರುವ ಔಷಧೀಯ ಗುಣಗಳನ್ನು ನೆನಪಿಸಿದರು. 

ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ ಮಾತನಾಡಿ  ಕೃಷಿ ಪರಂಪರೆಯಿಂದ ಬೆಳೆದು ಬಂದ ನಮಗೆ ಪರಿಸರವೆ ಉಸಿರು ಎಂದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಪ್ರಸಾದ್ ಭಟ್, ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಕಾರ್ಯದರ್ಶಿ ಲತಾ ಯು. ಹೆಗ್ಡೆ ಹಾಗೂ ಹೆಗ್ಗಡೆ ಸಮಾಜ ಸಂಘದ ಪದಾಧಿಕಾರಿಗಳು, ದೇವಸ್ಥಾನದ  ಮೊಕ್ತೇಸರರು, ಸಂಘದ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಆಟಿ ಕೂಟದ ಸಿದ್ಧತೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ದಯಾನಂದ ಹೆಗ್ಡೆ,  ಹರೀಶ್ ಹೆಗ್ಡೆ, ರಾಜೇಶ್ ಹೆಗ್ಡೆ, ಜಯರಾಜ್ ಹೆಗ್ಡೆ, ಶ್ರೇಯಸ್ ಹೆಗ್ಡೆ ಹಾಗೂ ಮತ್ತಿತರರನ್ನು ಗೌರವಿಸಲಾಯಿತು.

ದೇವಸ್ಥಾನದ ಕಾರ್ಯದರ್ಶಿ ಶುಭರಾಜ್ ಹೆಗ್ಡೆ ಸ್ವಾಗತಿಸಿದರು.   ಮಹಿಳಾ ಘಟಕದ ಅಧ್ಯಕ್ಷೆ ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿ ಸದಾಶಿವ ಹೆಗ್ಡೆ ವಂದಿಸಿದರು. ಸಮಾಜದ ಸದಸ್ಯರುಗಳಿಂದ, ಮಕ್ಕಳಿಂದ

ಆಟಿ ಆಚರಣೆಯನ್ನು ನೆನಪಿಸುವ ವಿವಿಧ ಕಾರ್ಯಕ್ರಮಗಳು ನಡೆದವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article