ಜು. 5ರಂದು ಮೂಡುಬಿದಿರೆಯಲ್ಲಿ ಶ್ರೀ ಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ಜು. 5ರಂದು ಮೂಡುಬಿದಿರೆಯಲ್ಲಿ ಶ್ರೀ ಗುರು ಚಾಣಕ್ಯ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ


ಮೂಡುಬಿದಿರೆ: ಇಲ್ಲಿನ ಜಿ.ವಿ.ಪೈ ಆಸ್ಪತ್ರೆ ಬಳಿ ಇರುವ ವಿಶ್ವಾಸ್ ಪೈನಾಪಲ್ ಸಿಟಿಯ ಕಟ್ಟಡದಲ್ಲಿ ಶ್ರೀಗುರು ಚಾಣಾಕ್ಯ ಸೌಹಾರ್ದ ಸಹಕಾರಿ ಸಂಘ(ರಿ) ಜು. 5 ಭಾನುವಾರದಂದು ಬೆಳಿಗ್ಗೆ 11.31ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುದಶ೯ನ್ ಎಂ. ತಿಳಿಸಿದ್ದಾರೆ.

ಪ್ರಸಾದ್ ಕುಮಾರ್ ಎಡಪದವು ಉಪಾಧ್ಯಕ್ಷರಾಗಿ, ಮುಖ್ಯ ಕಾಯ೯ನಿವ೯ಹಣಾಧಿಕಾರಿಯಾಗಿ ಮಾರುತಿ ಜಿ. ಮಾಳಾಯಿ ಹಾಗೂ ಡಾ. ಗುರುರಾಜ ಉಡುಪ ಕಿನ್ನಿಗೋಳಿ ಅವರು ಯೋಜನಾ ಸಮನ್ವಯ ನಿದೇ೯ಶಕರಾಗಿದ್ದಾರೆ. 

ಕೃಷ್ಣಪ್ರಸಾದ್ ಮಡ್ತಿಳ ಸುಳ್ಯ, ಪ್ರಭಾಕರ ಪ್ರಭು ಸಿದ್ದಕಟ್ಟೆ, ಕಿಶೋರ್ ಕೊಟ್ಟಾರಿ ಕುಲಶೇಖರ, ವಿಶ್ವನಾಥ ಪಿ. ದೇವಾಡಿಗ, ಸುಕೇಶ್ ಶೆಟ್ಟಿ ಎದಮಾರು, ಶಕೀಲ ಕಾವ ಶಕ್ತಿನಗರ, ಸಚಿನ್ ಕುಮಾರ್ ಬಿ. ಪುತ್ತೂರು, ಸುದಶ೯ನ ಕೊಂಪದವು, ಎಂ. ಕೆ. ದಿನೇಶ್ ಕುಮಾರ್ ಮೂಡುಬಿದಿರೆ, ಮಂಜುಳಾ ಎ. ರಾವ್ ಮಂಗಳೂರು, ಸುರೇಶ್ ರಾಜ್ ಭಟ್ ಕೂಡು ಮತ್ತು ಜಯಾನಂದ ನಾಯ್ಕ್ ಮೊಗರು ಅವರು ಆಡಳಿತ ಮಂಡಳಿಯ ನಿದೇ೯ಶಕರುಗಳಾಗಿದ್ದಾರೆ ಎಂದು ಸುದಶ೯ನ್ ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article