ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ: ಫಿಲೋಮಿನಾ ಕಾಲೇಜಿನ ಮೂವರಿಗೆ ಪ್ರಶಸ್ತಿ

ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ: ಫಿಲೋಮಿನಾ ಕಾಲೇಜಿನ ಮೂವರಿಗೆ ಪ್ರಶಸ್ತಿ


ಪುತ್ತೂರು: ‘ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನ-2026'ರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ವಿಜೇತರಾಗಿದ್ದಾರೆ. 

ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ನಡೆದ ಈ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದಲ್ಲಿ ದ್ವಿತೀಯ ಬಿ.ಎಸ್ಸಿಯ ಶ್ರೀವಿದ್ಯಾ ಎನ್. ಪ್ರಥಮ ಸ್ಥಾನವನ್ನು ಹಾಗೂ ದ್ವಿತೀಯ ಎಂ.ಎಸ್ಸಿ ಭೌತಶಾಸ್ತ್ರದ ದೀಕ್ಷಾ ಕೆ.ಸಿ. ಪ್ರೋತ್ಸಾಹಕ ಬಹುಮಾನವನ್ನು, ಸಾರ್ವಜನಿಕ ವಿಭಾಗದಲ್ಲಿ ಕಾಲೇಜಿನ ಕಚೇರಿ ಸಿಬ್ಬಂದಿ ಲೀನಾ ಮಂಡೋನ್ಸಾ ಅವರು ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡಿದ್ದು, ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿಜೇತರಿಗೂ ಕಾಲೇಜಿನ ಪ್ರಾಂಶುಪಾಲರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article