ಮೂಡುಬಿದಿರೆ: ತಾಲೂಕಿನಲ್ಲಿ ಶುಕ್ರವಾರ ಬೀಸಿದ ಗಾಳಿ ಮಳೆಗೆ ಅಳಿಯೂರು ಜಂಕ್ಷನ್ ನಲ್ಲಿ ಮರಬಿದ್ದು ಕಾರು ಹಾಗೂ ಪಿಕಪ್ ಜಖಂಗೊಂಡ ಘಟನೆ ನಡೆದಿದೆ.
ಮರ ಬಿದ್ದ ಪರಿಣಾಮವಾಗಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ನಂತರ ಸ್ಥಳೀಯರು ಮರವನ್ನು ತೆರವುಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.