ಪಣಪಿಲದಲ್ಲಿ ಐದನೇ ವರ್ಷದ 'ಮತ್ಸ್ಯ ಮೇಳ': ಮೀನು ಕೃಷಿ ತರಬೇತಿ ಕಾಯ೯ಕ್ರಮ
ಕೊಟ್ಟಾರಿ ಬೆಟ್ಟು ದೇವರಾಜ್ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು.
ಹೆಬ್ಬಾಳ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾಕ್ಟರ್ ಚೇತನ್ ಮಾಹಿತಿದಾರರಾಗಿ ಭಾಗವಹಿಸಿ ಮೀನು ಸಾಕಾಣಿಕೆ ವೈಜ್ಞಾನಿಕವಾಗಿ ನಡೆಸಿದಾಗ ಬರುವ ಆದಾಯಗಳು ಉತ್ತಮವಾಗಿರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಸಿಹಿ ನೀರಿನಲ್ಲಿ ಮೀನು ಉತ್ಪಾದನೆಯಾದಾಗ ಹೆಚ್ಚಿನ ಬೇಡಿಕೆಗಳಿಗೆ ಸ್ಪಂದಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ದರೆಗುಡ್ಡೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಬೇಲೊಟ್ಟು ಅಶೋಕ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶ್ರೀ ರಾಜ್ ಫಾರ್ಮ್ ನಲ್ಲಿ ಮೀನುಗಾರಿಕೆಯನ್ನು ಲಾಭದಾಯಕವಾಗಿ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಂಚಾಯತ್ ಮಾಜಿ ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಮಾಜಿ ಸದಸ್ಯ ದೀಕ್ಷಿತ್ ಕೆ ಪಣಪಿಲ, ಕೊಟ್ಟಾರಿಬೆಟ್ಟು ಹರಿಯಪ್ಪ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ರಾಜ್ ಫಾರ್ಮ್ ಮುಖ್ಯಸ್ಥ ರಾಜೇಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 500 ರಷ್ಟು ದೊಡ್ಡ ಗಾತ್ರದ ಮೀನುಗಳು 25,000 ದಷ್ಟು ಮೀನು ಮರಿಗಳು ಇಂದು ಮಾರಾಟ ಗೊಳ್ಳಲಿರುವುದಾಗಿ ತಿಳಿಸಿದರು.
ಕಾಟ್ಲಾ, ರೋಹು, ಗ್ರಾಸ್, ಕಾರ್ಪ್, ಗೌರಿ, ಫಂಗೇಸಿಯಸ್, ತಿಲಪಿಯಾ, ರೂಪ್ ಚಂದ್, ಮಡೆಂಜಿ ಮೀನುಗಳು ಮಾರಾಟಕ್ಕೆ ಲಭ್ಯವಿರುವುದಾಗಿ ಅವರು ತಿಳಿಸಿದರು.
ಸರಿತಾ ಪ್ರಾರ್ಥನೆಗೈದು ಧನ್ಯವಾದವಿತ್ತರು.

