ಮೂಡುಬಿದಿರೆಯಲ್ಲಿ ಸೂಕ್ತ ಪಾಕಿ೯ಂಗ್ ವ್ಯವಸ್ಥೆ, ಘನ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲು ನಾಗರಿಕರ ಆಗ್ರಹ

ಮೂಡುಬಿದಿರೆಯಲ್ಲಿ ಸೂಕ್ತ ಪಾಕಿ೯ಂಗ್ ವ್ಯವಸ್ಥೆ, ಘನ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲು ನಾಗರಿಕರ ಆಗ್ರಹ


ಮೂಡುಬಿದಿರೆ: ವಾರದ ಸಂತೆ ಸಂದಭ೯ ರಸ್ತೆ ಬದಿಗಳಲ್ಲಿ ವ್ಯಾಪಾರ, ಬಸ್ ನಿಲ್ದಾಣದ ಆವರಣದಲ್ಲಿ  ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾಕಿ೯ಂಗ್ ಮಾಡುತ್ತಿರುವುದರಿಂದ ಜನ ಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.


ಸೋಮವಾರ ಸಂಜೆ  ಸಮಾಜ ಮಂದಿರದಲ್ಲಿ ಮೂಡುಬಿದಿರೆಯ ನಾಗರಿಕರ ವತಿಯಿಂದ ನಡೆದ ಸಭೆಯಲ್ಲಿ ಈ ಬಗ್ಗೆ ಚಚೆ೯ಗಳು ನಡೆಯಿತು. 


ಮೂಡುಬಿದಿರೆಯಲ್ಲಿ ಶುಕ್ರವಾರ ನಡೆಯುವ ವಾರದ ಸಂತೆಯ ಸಂದಭ೯ದಲ್ಲಿ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಿರುವುದರಿಂದ ಗ್ರಾಹಕರು ಅಲ್ಲಿಯೇ ವಾಹನಗಳನ್ನು ನಿಲ್ಲಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಾಗ ಟ್ರಾಫಿಕ್ ಸಮಸ್ಯೆಯಾಗುತ್ತದೆ. ಈ ಸಂದಭ೯ ಟೈಮಿಂಗ್ ಬರುವ ಬಸ್ ಗಳು ಬಸ್ ನಿಲ್ದಾಣ ತಲುಪಲು ಸಾಧ್ಯವಾಗದೆ ಕೆಳಗಿನ ರಸ್ತೆಯಲ್ಲೇ ಜನರನ್ನು ಇಳಿಸಿ ಕಾಕ೯ಳದ ಕಡೆಗೆ ಸಂಚರಿಸುವುದರಿಂದ ಜನ ಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆಂದು ನಾಗರಿಕರಾದ ರಾಜೇಂದ್ರ ಪೈ ಆರೋಪಿಸಿದರು. 

ಖಾಸಗಿ ಬಸ್ ಗಳು ಅಲ್ಲಲ್ಲಿ ನಿಲುಗಡೆ ಮಾಡುತ್ತಿರುವ ಬಗ್ಗೆಯೂ ಆರೋಪಿಸಿದ ಅವರು ಇಂತಹ ಬಸ್ ಗಳಿಗೆ ಪೊಲೀಸರು ದಂಡ ವಿಧಿಸಬೇಕೆಂದು ಆಗ್ರಹಿಸಿದರು. 

ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಇಂದಿರಾಗಾಂಧಿ ವಾಣಿಜ್ಯ ಸಂಕೀಣ೯ದ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳು, ಕಾರು ಮತ್ತು ಆಟೋಗಳನ್ನು ಪಾಕಿ೯ಂಗ್ ಮಾಡುತ್ತಿದ್ದು ಬಸ್ ಗಳ ನಿಲುಗಡೆಗೆ ಕಷ್ಟ ಸಾಧ್ಯವಾಗಿದ್ದು, ಈ ಬಗ್ಗೆ ಹಲವು ಬಾರಿ ಪುರಸಭೆ, ಪೊಲೀಸ್ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ವ್ಯಾಪಾರಸ್ಥರ ಪರವಾಗಿ ಪ್ರದೀಪ್ ಸಭೆಯ ಗಮನಕ್ಕೆ ತಂದ ಅವರು ಬೆಳಿಗ್ಗೆಯಿಂದ ಸಂಜೆವರೆಗೆ ಪಾಕಿ೯ಂಗ್ ಮಾಡಿ ಹೋಗುವ ವಾಹನಗಳಿಗೆ ಲಾಕ್ ಹಾಕಬೇಕೆಂದು ಆಗ್ರಹಿಸಿದರು.

ವಾಣಿಜ್ಯ ಸಂಕೀರ್ಣ ಮುಂಭಾಗದಲ್ಲಿ ಯಾರಿಗೂ ಪಾಕಿ೯ಂಗ್ ಗೆ ಅವಕಾಶ ನೀಡಬಾರದು, ಅಂಗಡಿ ಮುಂಗಟ್ಟು ಹೊಂದಿರುವವರಿಗೆ ಸಂಕೀರ್ಣ ದ ಹಿಂಭಾಗದಲ್ಲಿ ನಿಲ್ಲಿಸಲು ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ  ಯಶೋಧರ   ಸಲಹೆ ನೀಡಿದರು.

ನವಮಿ, ಪ್ರೆಸ್ಟೀಜ್ ಟವರ್ ಹಾಗೂ ಅಗರಿ ಅಂಗಡಿಗಳ ಮುಂಭಾಗದಲ್ಲಿ ಪಾಕಿ೯ಂಗ್ ಗೆ ಮೀಸಲಿಟ್ಟಿರುವ ಜಾಗದಲ್ಲಿ ವ್ಯಾಪಾರ ನಡೆಸುತ್ತಿರುವ ಬಗ್ಗೆಯೂ ಸಭೆಯಲ್ಲಿ ಚಚೆ೯ ನಡೆಯಿತು.

ಬಸ್ ಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧ ಪಟ್ಟ ಬಸ್ ಗಳ ಮಾಲಕರನ್ನು ಕರೆಸಿ ಸಭೆ ನಡೆಸಿ ಸೂಕ್ತಕ್ರಮ ಕೈಗೊಳ್ಳುವ ಬಗ್ಗೆ ಕೆನರಾ ಬಸ್ ಮಾಲಕರ ಸಂಘದ ಮೂಡುಬಿದಿರೆ ಅಧ್ಯಕ್ಷ ನಾರಾಯಣ ಪಿ.ಎಂ. ಭರವಸೆ ನೀಡಿದರು. 

ಈ ಸಮಸ್ಯೆಗಳನ್ನು ನಿವಾರಿಸಲು ಮತ್ತೊಮ್ಮೆ ಶಾಸಕ ಉಮಾನಾಥ್ ಕೋಟ್ಯಾನ್, ತಹಶೀಲ್ದಾರ್, ಪುರಸಭೆಯ ಮುಖ್ಯಾಧಿಕಾರಿಯವರಿಗೆ ಮತ್ತು ಪೊಲೀಸ್ ನಿರೀಕ್ಷರಿಗೆ ಮನವಿ ಮಾಡುವುದೆಂದು ಸಭೆಯಲ್ಲಿ ತೀಮಾ೯ನಿಸಲಾಯಿತು. 

ನಾಗರಿಕರ ಪರವಾಗಿ ಅಮರ್ ಕೋಟೆ, ಮನೋಜ್ ಮಾಲ೯, ಬಸ್ ಮಾಲಕರುಗಳಾದ ಸುರೇಂದ್ರ , ಕೌಸ್ತುಭ್, ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್ ಏಜೆಂಟರುಗಳಾದ ಸಂತೋಷ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.


ಘನ ವಾಹನಗಳು ಮುಖ್ಯ ರಸ್ತೆಯಲ್ಲಿ ಸಾಗುತ್ತಿರುವುದರಿಂದ ಇನ್ನೂ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿದೆ. ಆದ್ದರಿಂದ ಘನ ವಾಹನಗಳನ್ನು ವಿದ್ಯಾಗಿರಿಯಿಂದ ಮಾಸ್ತಿಕಟ್ಟೆಯ ಬೈಪಾಸ್ ರಸ್ತೆಯ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಬೇಕೆಂಬ ಸಲಹೆಯನ್ನು ಬಸ್ ಮಾಲಕ ಶಶಿ ಆಮೀನ್ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article