"ಶ್ರೀ ಗಣೇಶ ಸೇವಾ ಧಾಮ"ದ ನಿಮಾ೯ಣ  ಜಿ.ಕೆ. ಭಟ್ರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ: ಶಿಕಾರಿಪುರ ಈಶ್ವರ ಭಟ್

"ಶ್ರೀ ಗಣೇಶ ಸೇವಾ ಧಾಮ"ದ ನಿಮಾ೯ಣ ಜಿ.ಕೆ. ಭಟ್ರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ: ಶಿಕಾರಿಪುರ ಈಶ್ವರ ಭಟ್


ಮೂಡುಬಿದಿರೆ: ಜು. 22ರಂದು ನಡೆದ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುವ ನಿವೃತ್ತ ಶಿಕ್ಷಕ, ಆರ್. ಎಸ್. ಎಸ್. ನ ಹಿರಿಯ ಕಾಯ೯ಕತ೯ ಜಿ. ಕೆ. ಭಟ್ (ಗೋಪಾಲಕೃಷ್ಣ ಭಟ್) ಅವರಿಗೆ ಕಲ್ಲಬೆಟ್ಟು ಗಣೇಶೋತ್ಸವ ಸೇವಾ ಟ್ರಸ್ಟ್, ಸ್ವಣ೯ ಗೌರಿ ಮಾತೃ ಮಂಡಳಿ ಹಾಗೂ ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ಕರಿಂಜೆ-ಕಲ್ಲಬೆಟ್ಟು-ಮಾರೂರು ಇದರ ವತಿಯಿಂದ ಶ್ರದ್ಧಾಂಜಲಿ ಅಪಿ೯ಸುವ ಕಾಯ೯ಕ್ರಮ ಭಾನುವಾರ ಕಲ್ಲಬೆಟ್ಟುವಿನ ಅಕ್ಷಯಧಾಮ ಸಭಾಂಗಣದಲ್ಲಿ ನಡೆಯಿತು.

ಶ್ರೀ ಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು  ಮಾತನಾಡಿ ಕಳೆದ 24 ವಷ೯ಗಳಿಂದ ಕಲ್ಲಬೆಟ್ಟು ಗಣೇಶೋತ್ಸವದಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡವರು ಜಿ. ಕೆ. ಭಟ್ರು. ಎಲ್ಲರೊಂದಿಗೆ ಸ್ನೇಹಭಾವದಿಂದ ಬೆರೆಯುವ ಮೂಲಕ ತನ್ನ ವಿಶೇಷ ವ್ಯಕ್ತಿತ್ವ ದಿಂದ ಗುರುತಿಸಿಕೊಂಡವರು. ಗಣೇಶೋತ್ಸವದ ಕಟ್ಟಡ ಆಗಬೇಕೆಂಬ ಆಸೆ ಅವರಲ್ಲಿತ್ತು ಆದ್ದರಿಂದ ಯಾರಿಗೂ ಹೇಳದೆಯೇ 50 ಸಾವಿರ ರೂವನ್ನು ಅವರು ಅಕೌಂಟ್ ಗೆ ವಗಾ೯ಯಿದ್ದರು ಇಂತಹ ಅಪ೯ಣಾ ಭಾವವನ್ನು ಅವರು ತನ್ನಲ್ಲಿ ಮೈಗೂಡಿಸಿಕೊಂಡಿದ್ದರು. ಆದ್ದರಿಂದಾಗಿಯೆ ಗುರುಪೂಜೆಯ ದಿನದಂತೆ ಅವರಿಗೆ ಶ್ರದ್ಧಾಂಜಲಿ ಅಪಿ೯ಸುವ ಕಾಯ೯ಕ್ರಮದಲ್ಲಿ ಅವಕಾಶ ಸಿಕ್ಕಿದೆ ಓವ೯ ಸಂಘದ ಕಾಯ೯ಕತ೯ನಿಗೆ ಇದಕ್ಕಿಂತ ದೊಡ್ಡ ಗೌರವವಿಲ್ಲ ಎಂದರು. 

ನಿವೃತ್ತ ಶಿಕ್ಷಕ, ಶ್ರೀ ಗಣೇಶ ಸೇವಾ ಟ್ರಸ್ಟ್ ನ ಧಮ೯ದಶಿ೯  ಶಿಕಾರಿಪುರ ಈಶ್ವರ ಭಟ್ ಅವರು ಶ್ರದ್ಧಾಂಜಲಿ ಅಪಿ೯ಸಿ ಮಾತನಾಡಿ ತನ್ನ ಬದುಕನ್ನು ಘನವಾದ ತತ್ವಕ್ಕೆ ಮುಡಿಪಾಗಿಟ್ಟವರು ಜಿ. ಕೆ. ಭಟ್ರು. ಸನಾತನ ಸಮಾಜ, ಧಮ೯ ಹಾಗೂ ಸನಾತನ ಸಂಸ್ಕಾರದ ಮೂಲಕ ಸಮಾಜಕ್ಕೇನಾದರೂ ಕೊಡುಗೆಯನ್ನು ನೀಡಬೇಕೆಂಬ ಮನೋಭಾವವನ್ನು ಹೊಂದಿದ್ದ ಅಪರೂಪದ, ಸಾತ್ವಿಕ ವ್ಯಕ್ತಿಯನ್ನು ನಾವು ಕಳೆದುಕೊಂಡಿರುವುದು ಬೇಸರದ ಸಂಘತಿ. 

ಗಣೇಶೋತ್ಸವ ನಡೆಸಲು ಸ್ವಂತ ಕಟ್ಟಡಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಜಾಗವನ್ನು ಖರೀದಿಸಲಾಗಿದ್ದು ಅದರಲ್ಲಿ "ಶ್ರೀ ಗಣೇಶ ಸೇವಾ ಧಾಮ" ನಿಮಾ೯ಣವಾಗಬೇಕೆಂಬ ಕನಸ್ಸನ್ನು ಕಂಡವರು ಜಿ. ಕೆ. ಭಟ್ರು ಅವರ ಕನಸನ್ನು ನನಸು ಮಾಡಲು ನಾವು ಮನಸು ಮಾಡಿದರೆ ಅದು ನಾವು ನಿಜವಾಗಿಯೂ ಅವರಿಗೆ ಶ್ರದ್ಧಾಂಜಲಿ ಅಪಿ೯ಸಿದಂತೆ ಎಂದು ಅಭಿಪ್ರಾಯ ಪಟ್ಟರು. 

ಉದ್ಯಮಿ ಕೆ. ಶ್ರೀಪತಿ ಭಟ್, ರಮೇಶ್ಚಂದ್ರ ಪಿ., ಉಪನ್ಯಾಸಕ ಹರೀಶ್ ಕಾಪಿಕಾಡ್ ಜಿ. ಕೆ. ಭಟ್ಟರ ಬಗ್ಗೆ ಮಾತನಾಡಿದರು.

ಹಿರಿಯ ಸಾಹಿತಿ ಸದಾನಂದ ನಾರಾವಿ ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article