ಯುವವಾಹಿನಿ ಮಂಗಳೂರು ಘಟಕದ ಸಾಪ್ತಾಹಿಕ ಸಭೆ

ಯುವವಾಹಿನಿ ಮಂಗಳೂರು ಘಟಕದ ಸಾಪ್ತಾಹಿಕ ಸಭೆ


ಮಂಗಳೂರು: ಯುವವಾಹಿನಿ ಮಂಗಳೂರು ಘಟಕದ ಯುವವಾಹಿನಿ ಸಭಾಂಗಣದಲ್ಲಿ ಜು.26 ರಂದು ನಡೆದ ಸಾಪ್ತಾಹಿಕ ಸಭೆ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪುಂಡಲೀಕ ಲಕಾಟಿ ಭಾಗವಹಿಸಿ, ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಮಾತನಾಡಿ, ಧೂಮಪಾನದಲ್ಲಿ 4 ಸಾವಿರದಷ್ಟು ಕೆಮಿಕಲ್ ಇದೆ. ಅವುಗಳಲ್ಲಿ ನಿಕೋಟಿನ್, ಆಸಿಡಿಕ್, ಅಮೋನಿಯಂ, ಟಾರ್ ಹೀಗೆ 4 ಸಾವಿರದಷ್ಟು ವಿಷಕಾರಿ ಅಂಶಗಳನ್ನು ಒಳಗೊಂಡಿದೆ. ಇದನ್ನು ಸೇವನೆ ಮಾಡುವ ವ್ಯಕ್ತಿಯ ಸಾವು ಕೂಡ ಅಷ್ಟೇ ಭಯಂಕರವಾಗಿರುತ್ತದೆ ಎಂದು ಎಚ್ಚರಿಸಿದರು.

ತಂಬಾಕು, ಧೂಮಪಾನ ಸೇವನೆಯಲ್ಲಿ ಸೆಕೆಂಡ್ ಹ್ಯಾಂಡ್ ಸ್ಮೋಕ್ ಹಾಗೂ ತರ್ಡ್ ಹ್ಯಾಂಡ್ ಸ್ಮೋಕ್ ಎಂದು ಇರುತ್ತದೆ. ಸೆಕೆಂಡ್ ಹ್ಯಾಂಡ್ ಸ್ಮೋಕ್ ಒಬ್ಬ ವ್ಯಕ್ತಿ ಮನೆ ಒಳಗೆ ಧೂಮಪಾನ ಮಾಡುತ್ತಾನೆ, ಆ ಹೊಗೆ ಮನೆಯೊಳಗೆ ಇರುತ್ತದೆ. ಅದನ್ನು ಮನೆಯಲ್ಲಿ ಇರುವ ಸದಸ್ಯರು ಸೇವನೆ ಮಾಡುವಂತಾಗುತ್ತದೆ., ತರ್ಡ್ ಹ್ಯಾಂಡ್ ಸ್ಮೋಕ್ ಧೂಮಪಾನ ಸೇವನೆ ಮಾಡುವ ವ್ಯಕ್ತಿಯ ಪತ್ನಿ ಗರ್ಭಿಣಿ ಆಗಿದ್ದಾಗ ಅವಳ ಮುಂದೆ ಸ್ಮೋಕ್ ಮಾಡುವುದರಿಂದ ಅಥವಾ ಆಕೆ ಗುಟ್ಕಾ ಸೇವಿಸಿದರೆ ಗರ್ಭದಲ್ಲಿ ಇರುವ ಮಗುವಿಗೂ ಸೇವನೆ ಮಾಡಿಸಿದಂತೆ ಎಂದು ವಿವರಿಸಿದರು.

ಮುಂದೆ ತಂಬಾಕು ನಿಯಂತ್ರಣ ಕಾಯ್ದೆ 2003, ಎಲ್ಲಾ ಕಡೆ ಧೂಮಪಾನ ನಿಷೇಧ ಪ್ರದೇಶ ಅಂತ ಹಾಕಿರುತ್ತಾರೆ. ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು. ಕಳೆದ ವರ್ಷ 2025ರಲ್ಲಿ ಕರ್ನಾಟಕದಲ್ಲಿ ಮಾತ್ರ ಈ ಕಾಯ್ದೆಯನ್ನು ಅಮೆಂಡ್ಮೆಂಟ್ ಮಾಡಲಾಗಿದೆ. ಒಟ್ಟು 32 ಸೆಕ್ಷನ್ ಇದ್ದು ಅದರಲ್ಲಿ ಮುಖ್ಯವಾಗಿ ಕೆಲವು ಸೆಕ್ಷನ್ ತುಂಬಾ ಅಗತ್ಯವಾಗಿರುತ್ತದೆ. ಸೆಕ್ಷನ್ 4-ಪಬ್ಲಿಕ್ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಗುಟ್ಕಾ ಸೇವನೆ ಮಾಡಿ ಉಗುಳುವುದು ಮಾಡಿದರೆ 1 ಸಾವಿರ ದಂಡದವರೆಗೆ ಹಾಕಬಹುದು, ಸೆಕ್ಷನ್ 5-ಅಂಗಡಿಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಧೂಮಪಾನ, ಗುಟ್ಕಾದ ಜಾಹಿರಾತು ಹಾಕುವಂತಿಲ್ಲ, 6ಎ-ಈ ಕಾಯ್ದೆಯಡಿಯಲ್ಲಿ 21 ವರ್ಷದ ವಯಸ್ಸಿನ ಯುವಕರು ಅಪ್ರಾಪ್ತ ವಯಸ್ಕರು ಧೂಮಪಾನ ಸೇವನೆ ಮಾಡುವಂತಿಲ್ಲ, ಸೆಕ್ಷನ್ ೬ಬಿ-ಶಾಲಾ ಕಾಲೇಜುಗಳ 100 ಮೀಟರ್ ನಲ್ಲಿ ಧೂಮಪಾನ, ಗುಟ್ಕಾ ಮಾರಾಟ ಮಾಡಬಾರದು, ಸೆಕ್ಷನ್ 6ಸಿ-ತಂಬಾಕು, ಧೂಮಪಾನ ಲೂಸ್ ಕೊಡಬಾರದು ಪ್ಯಾಕೆಟ್ ಪೂರ್ತಿ ನೀಡಬೇಕು, ಮತ್ತು ಸಿಗರೇಟು ಪ್ಯಾಕೆಟ್ ಮೇಲೆ ಕ್ಯಾನ್ಸರ್ ಚಿತ್ರ ಜೊತೆ ಹೆಲ್ಪ್ ಲೈನ್ ನಂಬರ್ ಹಾಕಿರಬೇಕು ಎಂದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೂಂ ನಂಬರ್ 16ರಲ್ಲಿ ತಂಬಾಕು, ಧೂಮಪಾನ ಬಿಡಿಸಲು ಉಚಿತವಾಗಿ ಚಿಕಿತ್ಸೆ, ಕೌನ್ಸಿಲಿಂಗ್ ಕೊಡಲಾಗುತ್ತದೆ. ಒಬ್ಬರ ಸಂಸಾರಕ್ಕೆ ಸಹಾಯ ಮಾಡುವುದು ಪುಣ್ಯದ ಕೆಲಸ. ಯಾರಿಗಾದರೂ ಈ ರೀತಿಯ ಸಮಸ್ಯೆ ಇದ್ದರೆ ಅವರನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಬಹುದು. ಈ ಎಲ್ಲಾ ಮಾಹಿತಿ ನೀಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರು ಕೈಜೋಡಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಪುಂಡಲೀಕ ಲಕಾಟಿ ಅವರಿಗೆ ಮಂಗಳೂರು ಘಟಕದ ಪರವಾಗಿ ಗೌರವ ಸಲ್ಲಿಸಲಾಯಿತು.

ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಸ್ವಾಗತಿಸಿ, ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article