ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದೇ ಸಮಸ್ಯೆಯಾಗಿದೆ: ಸಂಸದ ಚೌಟ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದೇ ಸಮಸ್ಯೆಯಾಗಿದೆ: ಸಂಸದ ಚೌಟ


ಉಳ್ಳಾಲ: ಗರ್ಭಾವಸ್ಥೆಯ ಮಗುವಿನಿಂದ ಹಿಡಿದು ಮರಣ ಹೊಂದುವವರೆಗೂ ಅನೇಕ ಯೋಜನೆಗಳು ಸರಕಾರದಿಂದ ಲಭಿಸುತ್ತಿವೆಯಾದರೂ ಅದನ್ನು ಜನರಿಗೆ ತಲುಪಿಸುವುದೇ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

ತಲಪಾಡಿ ನಾರ್ಲದ ಶ್ರೀ ನಾರ್ಲತ್ತಾಯ ನಾಗಬ್ರಹ್ಮ ಸೇವಾ ಸಮಿತಿ ಹಾಗೂ ಮಹಿಳಾ ಮಂಡಳಿ, ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ನಾರ್ಲ ಪಡೀಲಿನ ಸಂಗಮ್ ಫ್ರೆಂಡ್ಸ್ ಹಾಗೂ ಮಹಿಳಾ ಮಂಡಳಿ, ನವಕೇಸರಿ ಫ್ರೆಂಡ್ಸ್, ನವಕೇಸರಿ ಮಾತೃ ಮಂಡಳಿ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇವರ ಸಹಯೋಗದಲ್ಲಿ ನಾರ್ಲ ಪಡೀಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರದಂದು ನಡೆದ ಅಂಚೆ ಜನ ಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ದೇವಿಪುರ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನಾರ್ಲ, ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ನಾರ್ಲತ್ತಾಯ ನಾಗಬ್ರಹ್ಮ ಸೇವಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಸಂಗಮ್ ಫ್ರೆಂಡ್ಸ್ ಅಧ್ಯಕ್ಷ ಅಕ್ಷಯ್ ಶೆಟ್ಟಿ, ನವ ಕೇಸರಿ ಫ್ರೆಂಡ್ಸ್ ಅಧ್ಯಕ್ಷ ನಿತಿನ್ ಪೂಜಾರಿ, ವಿಕಲ ಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜಕ ಜಯಪ್ರಕಾಶ್ ತಚ್ಚಾಣಿ, ಅಂಚೆ ಇಲಾಖೆ ಮಂಗಳೂರು ವಿಭಾಗದ ಮುಖ್ಯಸ್ಥ ಶಿವಪ್ರಸಾದ್, ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ ನಾರ್ಲ ಹೊಸಮನೆ, ಬಿಜೆಪಿ ಬೂತ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article