ಎ.ಜಿ. ಸೋನ್ಸ್ ಐ.ಟಿ.ಐ. ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
5 ಕಂಪ್ಯೂಟರ್‌ಗಳನ್ನು ಸಂಸ್ಥೆಗೆ ದಾನವಾಗಿ ನೀಡಿದ ಎಂ.ಸಿ.ಎಸ್. ಬ್ಯಾಂಕ್ ಮೂಡಬಿದಿರೆ ಇದರ ವಿಶೇಷ ಕಾರ್ಯನಿರ್ವಾಣಾಧಿಕಾರಿ ಚಂದ್ರಶೇಖರ್ ಎಂ.ಅವರು ಕಂಪ್ಯೂಟರ್‌ಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 40 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ಈ ತಿಂಗಳಲ್ಲಿ ಸೇವಾನಿವೃತ್ತಿ ಗೊಳ್ಳಲಿರುವ, ಶ್ರೀನಿವಾಸ ಕಿಣಿ ಯವರು 2 ಕಂಪ್ಯೂಟರ್‌ಗಳನ್ನು ಸಂಸ್ಥೆಗೆ ದಾನವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಸಿ.ಎಚ್. ಅಬುಲ್ ಗಫೂರ್, ಕೆ.ಆರ್. ಪಂಡಿತ್, ರಾಮಪ್ರಸಾದ್ ಭಟ್, ಸುರೇಶ್ ಪ್ರಭು, ರಾಮಾನಂದ ಭಟ್, ಕೆ. ವೆಂಕಟೇಶ್ ಕಾಮತ್, ಜೆ.ಜೆ. ಪಿಂಟೋ, ಕಾರ್ಯದರ್ಶಿ ಮೇಜರ್ ಡಾ. ರಾಧಾಕೃಷ್ಣ ಶೆಟ್ಟಿ, ಎ. ಎಫ್. ಓ ಶ್ರೀಧರ್, ಎಂ.ಕೆ. ಅನಂತ ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಧನಂಜಯ ಶೆಟ್ಟಿ, ಎಸ್.ಎನ್ .ಎಂ. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ತರಿನಾ ನೋರೊನ್ಹಾ, ಪ. ಪೂ. ಕಾಲೇಜು ಪ್ರಾಂಶುಪಾಲೆ ವಿಜಯಲಕ್ಷ್ಮೀ, ಎ. ಜಿ ಸೋನ್ಸ್ ಐ. ಟಿ. ಐ ನ ಪ್ರಾಂಶುಪಾಲ ಶ್ರೀಕಾಂತ ಹೊಳ್ಳ, ತರಬೇತಿ ಅಧಿಕಾರಿಗಳು ಹಾಗು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.