ಕಲ್ಲಮುಂಡ್ಕೂರಿನಲ್ಲಿ ರಿಕ್ಷಾ ಚಾಲಕ ಮಾಲಕರ ಸಂಘ ಅಸ್ತಿತ್ವಕ್ಕೆ: ಸನ್ಮಾನ

ಕಲ್ಲಮುಂಡ್ಕೂರಿನಲ್ಲಿ ರಿಕ್ಷಾ ಚಾಲಕ ಮಾಲಕರ ಸಂಘ ಅಸ್ತಿತ್ವಕ್ಕೆ: ಸನ್ಮಾನ


ಮೂಡುಬಿದಿರೆ: ಕಲ್ಲಮುಂಡ್ಕೂರಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ  ರಿಕ್ಷಾ ಚಾಲಕ-ಮಾಲಕರ ಸಂಘವನ್ನು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ನಿಡ್ಡೋಡಿಯ ನಿಕಿಶಾ ಟವರ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಧರ್ ಭಟ್ ಅವರು ಆಶೀರ್ವದಿಸಿದ್ದು ಮೂಡುಬಿದಿರೆಯ ಖ್ಯಾತ ನ್ಯಾಯವಾದಿ ಶರತ್ ಶೆಟ್ಟಿ ಹಾಗೂ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾದ ಭುವನಾಭಿರಾಮ ಉಡುಪ ಹಾಗೂ ಕಲ್ಲಮುಂಡ್ಕೂರು ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾದ ಸುಂದರ ಪೂಜಾರಿ, ಸಂಘದ ಅಧ್ಯಕ್ಷ ಪ್ರವೀಣ್ ಜೋಗಿ ಅವರು ಉಪಸ್ಥಿತರಿದ್ದರು.

‌ಇಪ್ಪತ್ತು ವರ್ಷಗಳಿಂದ ರಿಕ್ಷಾ ಚಾಲಕರಾಗಿರುವ ಮದುಕುಮಾರ್ ಕಲ್ಲಮುಂಡ್ಕೂರು, ನಾಗೇಶ್ ನಿಡ್ಡೋಡಿ ಹಾಗೂ ಚಿಂಗ ಕಲ್ಲಮುಂಡ್ಕೂರು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂತೋಷ್ ಪಡೀಲ್ ಕಾರ್ಯಕ್ರಮ ನಿರೂಪಿಸಿ ಅನಿಲ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article