ಬಿಆರ್‌ಪಿ ಶಾಲೆಯಲ್ಲಿ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ

ಬಿಆರ್‌ಪಿ ಶಾಲೆಯಲ್ಲಿ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ


ಮೂಡುಬಿದಿರೆ: ಇಲ್ಲಿನ ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ ಶುಕ್ರವಾರ ನಡೆಯಿತು.

ರೋಟರಿ ಮಿಡ್ ಟೌನ್‌ನ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅವರು ಉದ್ಘಾಟಿಸಿ ಮಾತನಾಡಿ, ದೇಶವನ್ನು ಮುನ್ನಡೆಸುವ ಗ್ರಂಥವೇ ಸಂವಿಧಾನ. ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನತೆಯಿಂದ ಅವಕಾಶಗಳು ಸಿಗುವಂತೆಯಿದೆ. ನಿಮ್ಮ ಜೀವನದಲ್ಲಿ ಸಂವಿಧಾನದ ಮೌಲ್ಯಗಳನ್ನು ಇರಿಸಿಕೊಂಡು ಗುರಿಯೊಂದಿಗೆ ಮುನ್ನಡೆಯಿರಿ ಎಂದು ವಿದ್ಯಾಥಿ೯ಗಳಿಗೆ ಕರೆ ನೀಡಿದರು. 

ಶ್ರೀ ಮಹಾವೀರ ಕಾಲೇಜಿನ ಉಪನ್ಯಾಸಕಿ ಪದ್ಮಶ್ರೀ ಸಂಸತ್ತಿನ ಕುರಿತು ಮಾತನಾಡಿ, ನಾಯಕನಾದವನು ಕ್ರಿಯಾಶೀಲನಾಗಬೇಕು ಮತ್ತು ಕನಸುಗಳನ್ನು ಕಂಡು ನಮ್ಮ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆತ್ತವರೊಂದಿಗೆ ಗುರುಹಿರಿಯರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಉತ್ತಮ ನಾಗರಿಕರಾಗಿ ಸ್ನೇಹ ಬಾಂಧವ್ಯದಿಂದ ಬೆಳೆಯಬೇಕು ಎಂದರು.

ಆಡಳಿತ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿದ ಪುಷ್ಪರಾಜ್ ಅಧ್ಯಕ್ಷತೆ ವಹಿಸಿದ್ದರು. 

ರೋಟರಿ ಕ್ಲಬ್ ಮಿಡ್ ಟೌನ್ ಕಾರ್ಯದರ್ಶಿ ಅಭಿನಂದನ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶಿಕ್ಷಣ ಕಾಶಿಯಲ್ಲಿ ಬಾಬುರಾಜೇಂದ್ರ ಪ್ರಸಾದ್ ಪ್ರೌಢಶಾಲೆಯೂ ತನ್ನನ್ನು ಗುರುತಿಸಿಕೊಂಡಿರುವುದು ನಮ್ಮ ಹೆಮ್ಮೆ ಎಂದರು.

ಸದಸ್ಯ ಪ್ರಶಾಂತ ಭಂಡಾರಿ, ಕನ್ನಡ ಶಿಕ್ಷಕ ಗೋವಿಂದ ಭಟ್ ಅವರನ್ನು ಸ್ಮರಿಸಿ ಗುರುಹಿರಿಯರಿಗೆ ಗೌರವಿಸುವುದನ್ನು ಮರೆಯಬೇಡಿ ಎಂದರು.

ಶಾಲಾ ಹಳೆವಿದ್ಯಾರ್ಥಿ ಶ್ರೀ ರಾಘವೇಂದ್ರ ಮುಖ್ಯ ಶಿಕ್ಷಕಿ ತೆರಸಾ ಕರ್ಡೋಜಾ, ಶಾಲಾ ನಾಯಕ ಕುಮಾರ ಅನ್ವಿತ ಉಪಸ್ಥಿತರಿದ್ದರು. 

ಕುಮಾರ ಶಿವಪ್ರಸಾದ್ ಸ್ವಾಗತಿಸಿದರು. ಪ್ರೀತಿಕಾ ಪ್ರಾರ್ಥಿಸಿದರು. ಕಿರಣ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಸುಪ್ರಿಯಾ ಕಾಯ೯ಕ್ರಮ ನಿರ್ವಹಿಸಿದರು. ವಿದ್ಯಾಥಿ೯ನಿ ಪ್ರಾಪ್ತಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article