ನೀಟ್ ಪರೀಕ್ಷೆ: ಕಾಕ೯ಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾಥಿ೯ಗಳಿಂದ ಅತ್ಯುತ್ತಮ ಸಾಧನೆ
ವಿದ್ಯಾರ್ಥಿಗಳಾದ ತೇಜಸ್ ಹೆಗ್ಡೆ ಹೆಚ್.ಡಿ 99.8900442 ಪರ್ಸಂಟೈಲ್ ನೊಂದಿಗೆ 641 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ ಕ್ಯಾಟಗರಿ ವಿಭಾಗದಲ್ಲಿ 772 ನೇ ರ್‍ಯಾಂಕ್, ತೇಜಸ್ ಆರ್ .ಬಿ 99.7945892 ಪರ್ಸಂಟೈಲ್‌ನೊಂದಿಗೆ 626 ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ ಕ್ಯಾಟಗರಿ ವಿಭಾಗದಲ್ಲಿ 103ನೇ ರ್‍ಯಾಂಕ್, ಧ್ರುವ ವಿ. ಬಿ. 99.6808332 ಪರ್ಸಂಟೈಲ್ ನೊಂದಿಗೆ 614 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಕ್ಯಾಟಗರಿ ವಿಭಾಗದಲ್ಲಿ 668ನೇ ರ್‍ಯಾಂಕ್, ಲೇಖನ್ ಕಾರಿಯಪ್ಪ ಎಂ ಡಿ 99.6687826 ಪರ್ಸೆಂಟೇಲ್ ನೊಂದಿಗೆ 613 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 678 ರ್‍ಯಾಂಕ್, ಆರ್ಯ ವಿ 99.5818322 ಪರ್ಸಂಟೈಲ್ ನೊಂದಿಗೆ 606 ಅಂಕ, ಮೋಕ್ಷಾ ಬಿ. ಎಂ 99.5671273 ಪರ್ಸಂಟೈಲ್ ನೊಂದಿಗೆ 605 ಅಂಕಗಳಿಸಿ ಅಭೂತಪೂರ್ವ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಹಿತಾರ್ಥ ವಿ ಎಸ್.597, ನಂದನ್ ಜಿ.595, ಕೆ ಎನ್. ರಾಘವೇಂದ್ರ 585, ಮೋನಿಶ್ ಜಿ.582, ರಾಘವೇಂದ್ರ ಧರ್ಮಪ್ಪ ಗೌಡರ್ 582, ಅಶ್ವಿನ್ ಹೊಸಟ್ಟಿ 576, ಸೃಜನಾ ಎಸ್574, ರಶ್ಮಿ 573, ತರುಣ್ ಸಾಗರ್ 566, ಪವನ್ ಕಲ್ಕೂರು 563, ಶ್ರಾವ್ಯಾಬಾಲಕೃಷ್ಣ 562, ವಿ.ಆರ್ ಗಣೇಶ್ 561, ಪ್ರಣಮ್ಯ ಭಟ್ 561, ಶಮಿತಾ ನಾಯಕ್ 559, ವರ್ಷಿತಾ ಎನ್.559 ನೇಹಾ ಜಿ.ಆರ್. 554, ತನುಜಾ ಸಿ.ಪಿ.550, ಮಹಾಂತೇಶ್ ಬಳ್ಳಪ್ಪ 550 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ.
ಸಂಸ್ಥೆಯ 189 ವಿದ್ಯಾರ್ಥಿಗಳು 90 ಪರ್ಸಂಟೈಲ್ ಗಿಂತ ಅಧಿಕಅಂಕಗಳನ್ನು ಪಡೆದಿರುತ್ತಾರೆ. ಪ್ರತೀವರ್ಷವೂ ನೀಟ್ ಪರೀಕ್ಷೆಯ ಮೂಲಕ ಕಾಲೇಜಿನ ಹಲವಾರು ವಿದ್ಯಾರ್ಥಿಗಳು JIPMER, AIIMS MANGALAGIRI ಮತ್ತುAIIMS NAGPURನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.