ಸಮಾಜದ ಋಣ ತೀರಿಸಲು ಸಮಾಜಮುಖಿಯಾಗಿ ಕೆಲಸ ಮಾಡಬೇಕಾಗಿದೆ: ದಯಾನಂದ ಪೈ
Monday, July 20, 2026
ಮೂಡುಬಿದಿರಿ: ತಾಲೂಕಿನ ಪಡುಮಾರ್ನಾಡಿನ ಅಚ್ಚರಕಟ್ಟೆಯಲ್ಲಿ ಶ್ರೀ ಸುಮುಖ ಭಜನಾ ಮಂಡಳಿಯ ವಿದ್ಯಾರ್ಥಿಗಳಿಗೆ,ಪದಾಧಿಕಾರಿಗಳಿಗೆ ಮತ್ತು ಪೋಷಕರಿಗೆ ಛತ್ರಿ ವಿತರಣಾ ಕಾರ್ಯಕ್ರಮ ಮತ್ತು ತಬಲಾ ವಾದನ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಪಡುಮಾರ್ನಾಡು ಗ್ರಾಮ ಪಂಚಾಯತ್ ನ ಮಾಜಿ ಆಧ್ಯಕ್ಷ, ಭಜನಾ ಮಂಡಳಿಯ ಗೌರವಾಧ್ಯಕ್ಷರೂ ಆಗಿರುವ ಎಂ. ದಯಾನಂದ ಪೈ ಅವರು ಅಧ್ಯಕ್ಷತೆ ವಹಿಸಿ ಕೊಡುಗೆಯಾಗಿ ನೀಡಿದ ಛತ್ರಿಗಳನ್ನು ವಿತರಿಸಿ ಮಾತನಾಡಿ ಸಮಾಜದಿಂದ ನಾವು ನಾನಾ ವಿಧದ ರೂಪದಲ್ಲಿ ಉಪಕಾರವನ್ನು ಪಡೆಯುತ್ತಿದ್ದೇವೆ.ಹೀಗೆ ಸಮಾಜದ ಋಣ ನಮ್ಮ ಮೇಲಿರುವುದರಿಂದ ಸಮಾಜ ಮುಖಿಯಾಗಿ ನಾವು ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ಅಧ್ಯಯನದ ಜೊತೆಗೆ ಹೊರ ಪ್ರಪಂಚದಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಕುಣಿತ ಭಜನೆಯನ್ನು ಪ್ರೋತ್ಸಾಹಿಸುತ್ತಿರುವ ಮಕ್ಕಳ ಪೋಷಕರನ್ನು, ತರಬೇತುದಾರರನ್ನು ಅವರು ಅಭಿನಂದಿಸಿದರು.
ಭಜನಾ ಮಂಡಳಿಯ ಅಧ್ಯಕ್ಷೆ ಉಮಾವತಿ ಬಿ ಬಂಗೇರ ಅವರು ಕೊಡುಗೆಯಾ ನೀಡಿದ ತಬಲಾವನ್ನು ಈ ಸಂದರ್ಭದಲ್ಲಿ ಮಕ್ಕಳಿಗೆ ಹಸ್ತಾಂತರಿಸಿದರು.
ಮಂಡಳಿಯ ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ಕೃಷ್ಣಪ್ಪ ಪೆನ೯ಡ್ಕ, ಗೌರವ ಸಲಹೆಗಾರ ಪ್ರಮೋದ್ ಪೆರ್ನಡ್ಕ, ಭಜನಾ ಪರಿಷತ್ ಬೆಳುವಾಯಿ ವಲಯದ ಅಧ್ಯಕ್ಷ ಸದಾನಂದ ಕುಲಾಲ್ ಭಜನಾ ತರಬೇತುದಾರ ಲಕ್ಷ್ಮಣ್ ನಾಯ್ಕ್ ಮತ್ತು ಪ್ರವೀಣ್ ಸಾಲ್ಯಾನ್, ಖಜಾಂಚಿಗಳಾದ ಸುಪ್ರಿಯಾ ಮತ್ತು ಸ್ಮಿತಾ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿತಿನ್ ಕೋಟ್ಯಾನ್, ಸೌಮ್ಯ ಚೆಲುವಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ರವಿ ಮೂಲ್ಯ ಸ್ವಾಗತಿಸಿದರು. ಸೌಮ್ಯ ವಂದಿಸಿದರು.
