ಮೂಡುಬಿದಿರೆ ಮೊಸರು ಕುಡಿಕೆ ಉತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವ, ಸಾರ್ವಜನಿಕ ಗಣೇಶೋತ್ಸವ ಜಿಲ್ಲೆಯಲ್ಲೇ ಮಾದರಿ ಉತ್ಸವಗಳಾಗಿ ಊರಿಗೆ ಹೆಸರು ತರುತ್ತಿವೆ ಎಂದರು.
ಮಾಜಿ ಸಚಿವ, ಸಂಘಟನೆಯ ಗೌರವಾಧ್ಯಕ್ಷರಾದ ಕೆ.ಅಭಯಚಂದ್ರ ಅವರು ಉತ್ಸವ ನಿರ್ವಹಣೆಯಲ್ಲಿ ತಾನು ಶಾಸಕ, ಸಚಿವನಾಗಿರುವಾಗ ಪೋಲೀಸ್ ಅಧಿಕಾರಿಗಳು ನೀಡಿದ ಸಹಕಾರವನ್ನು ಉಲ್ಲೇಖಿಸಿ ಒಂದು ಭವ್ಯ ಪರಂಪರೆಯ ಉತ್ಸವ ಯಶಸ್ವಿಯಾಗಿ ಮುನ್ನಡೆಯುತ್ತಿರಲಿ ಎಂದು ಹಾರೈಸಿದರು.
ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್, ಉದ್ಯಮಿಗಳಾದ ಪ್ರಭಾಚಂದ್ರ ಜೈನ್, ರಾಜೇಂದ್ರ ಕುಮಾರ್ ಜೈನ್, ಆರ್.ಕೆ.ಭಟ್ ಪೊನ್ನೆಚಾರಿ ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಪಿ. ಅಶೋಕ ಕಾಮತ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘಟನೆಯ ಕಾರ್ಯದರ್ಶಿ ಸುಶಾಂತ್ ಕರ್ಕೇರಾ ಸ್ವಾಗತಿಸಿದರು.
ಅಧ್ಯಕ್ಷ ಸಂತೋಷ್ ಕುಮಾರ್ ಅತಿಥಿಗಳನ್ನು ಗೌರವಿಸಿ, ಆ.23ರಂದು 35ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ, ಸೆ.5ರಂದು ಸಾಂಸ್ಕೃತಿಕ ಕಲಾಪಗಳು ನಡೆಯಲಿದೆ ಎಂದು ತಿಳಿಸಿದರು.
ಸಂಚಾಲಕ ಬಿ.ಸುರೇಶ್ ರಾವ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಶಿವಾನಂದ ಶಾಂತಿ ವಂದಿಸಿದರು. ಗೌ. ಸಲಹೆಗಾರ ಧನಂಜಯ ಮೂಡುಬಿದಿರೆ ಕಾಯ೯ಕ್ರಮ ನಿರೂಪಿಸಿದರು.