ಕೌಶಲ್ಯಾಧರಿತ ಪಾಲಿಟೆಕ್ನಿಕ್ ಶಿಕ್ಷಣದಿಂದ ಉತ್ತಮ ಉದ್ಯೋಗ ಅವಕಾಶಗಳು: ಕೆ. ಅಭಯಚಂದ್ರ ಜೈನ್

ಕೌಶಲ್ಯಾಧರಿತ ಪಾಲಿಟೆಕ್ನಿಕ್ ಶಿಕ್ಷಣದಿಂದ ಉತ್ತಮ ಉದ್ಯೋಗ ಅವಕಾಶಗಳು: ಕೆ. ಅಭಯಚಂದ್ರ ಜೈನ್


ಮೂಡುಬಿದಿರೆ: ಇಂದು ವಿಶ್ವದಾದ್ಯಂತ ಕೌಶಲ್ಯಕ್ಕೆ ವಿಶೇಷ ಮನ್ನಣೆ ಲಭಿಸುತ್ತಿದ್ದು, ತಾಂತ್ರಿಕ ಕೌಶಲ್ಯ ಸಂವರ್ಧನೆಯ ಶಿಕ್ಷಣ ನೀಡುವ ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ವಿಫುಲ ಉದ್ಯೋಗದ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಎಸ್. ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. 

ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ಕಿನ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ  ಏರ್ಪಡಿಸಿದ್ದ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣ ಗೊಳ್ಳುತ್ತಿರುವ ಇಂದಿನ ಕಾಲದಲ್ಲಿ ಶ್ರೀ ಮಹಾವೀರ ಕಾಲೇಜ್ ಟ್ರಸ್ಟ್ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ಇ – ಮ್ಯಾಗಝಿನ್ “ಇಂಪ್ರೆಷನ್ಸ್ʼ ಅನ್ನು ಹಾಗೂ ಸಂಸ್ಥೆಯ ಶೈಕ್ಷಣಿಕ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರುಗಳಾದ ಸಿ. ಎಚ್. ಗಫೂರ್, ಪಿ. ರಾಮನಾಥ ಭಟ್, ಸುರೇಶ್ ಪ್ರಭು, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಗಣೇಶನ್ ಆರ್, ರಾಜೇಶ್ವರಿ ಕೆ. ಎನ್, ಹರೀಶ್ ತಂತ್ರಿ, ಗೋಪಾಲಕೃಷ್ಣ, ರಾಜೇಂದ್ರ, ಗುರುಪ್ರಸಾದ್ ಪ್ರಭು, ದಿವ್ಯಾ ಶೆಣೈ, ರಶ್ಮಿತಾ ಶೆಟ್ಟಿ, ಹಳೆವಿದ್ಯಾರ್ಥಿಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಇಂಡಕ್ಷನ್ ಕಾರ್ಯಕ್ರಮ ಸಂಚಾಲಕ ರಾಮಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲ ಸುರೇಶ್ ಡಿ. ಬಿ.  ಉಪಸ್ಥಿತರಿದ್ದರು.

ಪ್ರಾಂಶುಪಾಲೆ  ನೊರೊನ್ಹಾ ತರೀನಾ ರೀಟಾ ಸ್ವಾಗತಿಸಿದರು.  ನಿಕಟಪೂರ್ವ ಪ್ರಾಂಶುಪಾಲರಾದ ಜೆ.ಜೆ. ಪಿಂಟೊ ಕಾಲೇಜಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು. 

ಉಪನ್ಯಾಸಕ ಡಾ. ಗುರುದಾಸ್ ಎಸ್. ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಪ್ರಿಯಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article