ಮೂಡುಬಿದಿರೆ ಬೆಟ್ಕೇರಿಯ ಪ್ರೇಮಾ ಜಯವರ್ಮ ಇಂದ್ರ ನಿಧನ
Monday, July 6, 2026
ಮೂಡುಬಿದಿರೆ: ತೀಥ೯ ಕ್ಷೇತ್ರಗಳ ಪ್ರವಾಸದಲ್ಲಿದ್ದ ಬೆಟ್ಕೇರಿ ನಿವಾಸಿ, ಬೈಕಣತಿಕಾರಿ ಬಸದಿಯ ಪ್ರೇಮಾ ಜಯವರ್ಮ ಇಂದ್ರ (78) ಅವರು ಬದರಿನಾಥದಲ್ಲಿ ಸೋಮವಾರ ಬೆಳಗ್ಗೆ ನಿಧನ ಹೊಂದಿದರು.
ಅವರು ಉತ್ತರ ಭಾರತದ ತೀರ್ಥಕ್ಷೇತ್ರಗಳ ಪ್ರವಾಸದಲ್ಲಿದ್ದ 23 ಮಂದಿ ಯಾತ್ರಾರ್ಥಿಗಳ ತಂಡದಲ್ಲಿದ್ದರು.
ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಹರಿದ್ವಾರದಲ್ಲಿ ಮಂಗಳವಾರ ನೆರವೇರಲಿದೆ ಎಂದು ತಿಳಿದು ಬಂದಿದೆ.