ಸೌಜನ್ಯ ಪ್ರಕರಣ: 14 ವರ್ಷದ ಬಳಿಕ ಮರು ತನಿಖೆ-ಆದೇಶ ಕಾಯ್ದಿರಿಸಿದ ಸುಪ್ರಿಂ ಕೋರ್ಟ್
ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಹಾಗೂ ಪ್ರಕರಣದಿಂದ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಲಾಗಿದ್ದ ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ತರಾಟೆ ತೆಗೆದುಕೊಂಡಿತು. ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಹೋಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಕರಣದ ಮರು ತನಿಖೆ ಸುಪ್ರೀಂ ಕೋರ್ಟ್ ಆದೇಶಿಸುವ ಸಾಧ್ಯತೆ ಇದೆ.
ಸಿಬಿಐ ವಿರುದ್ಧ ಅಸಮಾಧಾನ..
ವಿಚಾರಣೆ ವೇಳೆ ಸಿಬಿಐ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್, "14 ವರ್ಷಗಳಿಂದ ಸಮರ್ಪಕ ತನಿಖೆ ನಡೆದಿಲ್ಲ. ಸಿಐಡಿ ವರದಿಯನ್ನು ಕೇವಲ ಭಾಷಾಂತರ ಮಾಡಲಾಗಿದೆ. ತನಿಖಾಧಿಕಾರಿಯೇ ಘಟನಾ ಸ್ಥಳಕ್ಕೆ ಹೋಗಿಲ್ಲ. ಕೆಳ ನ್ಯಾಯಾಲಯದಲ್ಲಿ ಇನ್ನೂ ಕೆಲವರ ವಿರುದ್ಧ ತನಿಖೆ ನಡೆಸಬೇಕು ಎಂದು ಇದೇ ಸಿಬಿಐ ಹೇಳಿತ್ತು. ಈಗ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯನ್ನು ನೆಪವಾಗಿ ಹೇಳುವುದು ಸಮಂಜಸವಲ್ಲ," ಎಂದು ಕಿಡಿಕಾರಿತು.
ಈ ಮೂಲಕ, ದೇಶದ ಗಮನ ಸೆಳೆದಿರುವ ಸೌಜನ್ಯ ಪ್ರಕರಣದಲ್ಲಿ ಮರು ತನಿಖೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದ್ದು, ಅಂತಿಮ ಆದೇಶದ ಮೇಲೆ ಮುಂದಿನ ತನಿಖೆಯ ದಿಕ್ಕು ನಿರ್ಧಾರವಾಗಲಿದೆ.